ಶುಕ್ರವಾರ, ನವೆಂಬರ್ 20, 2015

Pumpkin idli recipe in kannada | ಚೀನಿಕಾಯಿ ಇಡ್ಲಿ | ಚೀನಿಕಾಯಿ ಕಡುಬು

Pumpkin idli recipe in kannada | ಚೀನಿಕಾಯಿ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ

ಚೀನಿಕಾಯಿ ಇಡ್ಲಿ ವಿಡಿಯೋ

ಸಿಹಿ ಇಡ್ಲಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತುರಿದ ಚೀನಿಕಾಯಿ
  2. 1/2 ಕಪ್ ತೆಂಗಿನ ತುರಿ
  3. 1/4 ಕಪ್ ಪುಡಿ ಮಾಡಿದ ಬೆಲ್ಲ
  4. 1/2 ಕಪ್ ಇಡ್ಲಿ ರವಾ
  5. 2 - 3 ಟೇಬಲ್ ಸ್ಪೂನ್ ನೀರು
  6. ಒಂದು ಏಲಕ್ಕಿ 
  7. ಉಪ್ಪು ರುಚಿಗೆ ತಕ್ಕಷ್ಟು.

ಖಾರ ಇಡ್ಲಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತುರಿದ ಚೀನಿಕಾಯಿ
  2. 1/2 ಕಪ್ ತೆಂಗಿನ ತುರಿ
  3. 1 - 2 ಒಣಮೆಣಸಿನಕಾಯಿ
  4. 1/2 ಕಪ್ ಇಡ್ಲಿ ರವಾ
  5. 2 - 3 ಟೇಬಲ್ ಸ್ಪೂನ್ ನೀರು
  6. ಸಣ್ಣ ಚೂರು ಶುಂಠಿ 
  7. ಸ್ವಲ್ಪ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು.

ಚೀನಿಕಾಯಿ ಸಿಹಿ ಇಡ್ಲಿ ಮಾಡುವ ವಿಧಾನ:

  1. ಒಂದು ಮಿಕ್ಸಿಯಲ್ಲಿ ಕಾಯಿತುರಿ, ಬೆಲ್ಲ ಮತ್ತು ಏಲಕ್ಕಿಯನ್ನು ನೀರು ಹಾಕದೆ ಪುಡಿ ಮಾಡಿ. 
  2. ಅದನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಇಡ್ಲಿ ರವೆ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ. 
  4. ಕೈಯಲ್ಲಿ ಚೆನ್ನಾಗಿ ಒತ್ತಿ ಕಲಸಿ. 5 ನಿಮಿಷ ಹಾಗೆ ಬಿಡಿ.
  5. ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಸ್ವಲ್ಪ ಮಿಶ್ರಣವನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ. 12 - 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. 
  6. ಇಡ್ಲಿ ಬಿಸಿಯಾಗಿರುವಾಗಲೇ ತುಪ್ಪದೊಂದಿಗೆ ಬಡಿಸಿ.

ಚೀನಿಕಾಯಿ ಖಾರ ಇಡ್ಲಿ ಮಾಡುವ ವಿಧಾನ:

  1. ಒಂದು ಮಿಕ್ಸಿಯಲ್ಲಿ ಕಾಯಿತುರಿ, ಒಣಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಹಾಕಿ. ನೀರು ಹಾಕದೆ ಪುಡಿ ಮಾಡಿ. 
  2. ಅದನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಇಡ್ಲಿ ರವೆ ಮತ್ತು ಸ್ವಲ್ಪ ನೀರು ಹಾಕಿ, ಕೈಯಲ್ಲಿ ಚೆನ್ನಾಗಿ ಒತ್ತಿ ಕಲಸಿ. 5 ನಿಮಿಷ ಹಾಗೆ ಬಿಡಿ.
  4. ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಸ್ವಲ್ಪ ಮಿಶ್ರಣವನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ. 12 - 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. 
  5. ಇಡ್ಲಿ ಬಿಸಿಯಾಗಿರುವಾಗಲೇ ತುಪ್ಪ ಅಥವಾ ಚಟ್ನಿ ಯೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...