Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ
ಸೌತೆಕಾಯಿ ಮೊಸರು ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಸೌತೆಕಾಯಿ
- 1/2 ಕಪ್ ಮೊಸರು
- 1 ಈರುಳ್ಳಿ
- 1 - 2 ಹಸಿ ಮೆಣಸಿನಕಾಯಿ
- 1 ಟೇಬಲ್ ಚಮಚ ಕರಿಬೇವು
- ದೊಡ್ಡ ಚಿಟಿಕೆ ಇಂಗು
- ದೊಡ್ಡ ಚಿಟಿಕೆ ಅರಿಶಿನ
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 1 ಕೆಂಪು ಮೆಣಸಿನಕಾಯಿ
- 1 ಟೀಸ್ಪೂನ್ ಉದ್ದಿನಬೇಳೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ:
- ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ.
- ಚೂರು ಮಾಡಿದ ಒಣಮೆಣಸಿನಕಾಯಿಯನ್ನು ಸೇರಿಸಿ.
- ಕತ್ತರಿಸಿದ ಈರುಳ್ಳಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ.
- ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ಕತ್ತರಿಸಿದ ಸೌತೆಕಾಯಿ ಸೇರಿಸಿ.
- ಉಪ್ಪು, ಅರಿಶಿನ ಮತ್ತು ಇಂಗು ಸೇರಿಸಿ.
- ಸೌತೆಕಾಯಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ.
- ಸ್ಟವ್ ಆಫ್ ಮಾಡಿ ಬಿಸಿ ಕಡಿಮೆ ಆಗುವವರೆಗೆ ಬಿಡಿ.
- ಕಡೆದ ಗಟ್ಟಿ ಮೊಸರು ಸೇರಿಸಿ ಕಲಸಿ.
- ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ