Mavinakayi neer gojju recipe in Kannada | ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ
ಮಾವಿನಕಾಯಿ ನೀರ್ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಸಣ್ಣ ಗಾತ್ರದ ಮಾವಿನಕಾಯಿ
- 2 - 4 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಒಣಮೆಣಸಿನಕಾಯಿ
- 7 - 8 ಎಸಳು ಬೆಳ್ಳುಳ್ಳಿ
- ಒಂದು ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವು
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ:
- ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ.
- ಒಂದು ಪಾತ್ರೆಗೆ ಕತ್ತರಿಸಿದ ಮಾವಿನಕಾಯಿ ಮತ್ತು ಹಸಿರು ಮೆಣಸಿನ ಕಾಯಿ ಸೇರಿಸಿ.
- ಒಂದು ಕಪ್ ನೀರು ಹಾಕಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ. ಒಂದೈದು ನಿಮಿಷ ಸಾಕಾಗುತ್ತದೆ.
- ಬಿಸಿ ಆರಿದ ಮೇಲೆ ಚನ್ನಾಗಿ ಮಸೆದುಕೊಳ್ಳಿ ಅಥವಾ ಮಿಕ್ಸಿಗೆ ಹಾಕಿ ಅರೆಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ.
- ಕರಿಬೇವು ಮತ್ತು ಕತ್ತರಿಸಿದ ಬೆಳ್ಳುಳಿ ಹಾಕಿ ಹುರಿಯಿರಿ.
- ಇಂಗನ್ನು ಸೇರಿಸಿ.
- ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ.
- ಮಸೆದಿಟ್ಟ ಮಾವಿನಕಾಯಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ.
- ಬಿಸಿ ಅನ್ನದೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ