Nellikai tambli recipe in Kannada |ನೆಲ್ಲಿಕಾಯಿ ತಂಬ್ಳಿ ಮಾಡುವ ವಿಧಾನ
ನೆಲ್ಲಿಕಾಯಿ ತಂಬ್ಳಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ನೆಲ್ಲಿಕಾಯಿ
- 1/4 ಕಪ್ ತೆಂಗಿನ ತುರಿ
- 1 - 2 ಹಸಿ ಮೆಣಸಿನಕಾಯಿ
- 1/4 - 1/2 ಕಪ್ ಮೊಸರು ಅಥವಾ ಮಜ್ಜಿಗೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- ಸ್ವಲ್ಪ ಕರಿಬೇವು
- 1 ಟೀಸ್ಪೂನ್ ಅಡುಗೆ ಎಣ್ಣೆ
ನೆಲ್ಲಿಕಾಯಿ ತಂಬ್ಳಿ ಮಾಡುವ ವಿಧಾನ:
- ನೆಲ್ಲಿಕಾಯಿ ತೊಳೆದು, ಬೀಜ ತೆಗೆದು, ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ.
- ನಂತರ ಒಂದು ಮಿಕ್ಸಿ ಜಾರ್ನಲ್ಲಿ ಕತ್ತರಿಸಿದ ನೆಲ್ಲಿಕಾಯಿ, ಹಸಿ ಮೆಣಸಿನಕಾಯಿ ಮತ್ತು ತೆಂಗಿನತುರಿ ತೆಗೆದುಕೊಳ್ಳಿ.
- ರುಚಿಗೆ ತಕ್ಕಂತೆ ನೀರು ಸೇರಿಸಿ.
- , ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆ ಸೇರಿಸಿ ಒಂದೆರಡು ಸುತ್ತು ಅರೆಯಿರಿ.
- ಒಂದು ಪಾತ್ರೆಗೆ ಬಗ್ಗಿಸಿ.
- ಸಾಸಿವೆ, ಕರಿಬೇವು ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ.
- ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ