ದೊಣ್ಣೆ ಮೆಣಸಿನ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ದೊಣ್ಣೆ ಮೆಣಸಿನಕಾಯಿ
- 2 ಹಸಿಮೆಣಸಿನಕಾಯಿ
- ಹುಣಿಸೇಹಣ್ಣು ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಒಣ ಮೆಣಸಿನಕಾಯಿ
- ದೊಡ್ಡ ಚಿಟಿಕೆ ಇಂಗು
- ಸ್ವಲ್ಪ ಕರಿಬೇವು
- 1 ಟೇಬಲ್ ಚಮಚ ಅಡುಗೆ ಎಣ್ಣೆ
ದೊಣ್ಣೆ ಮೆಣಸಿನ ಚಟ್ನಿ ಮಾಡುವ ವಿಧಾನ:
- ದೊಣ್ಣೆ ಮೆಣಸು ಮತ್ತು ಹಸಿ ಮೆಣಸಿನಕಾಯಿಯನ್ನುಕತ್ತರಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕತ್ತರಿಸಿದ ದೊಣ್ಣೆ ಮೆಣಸು ಮತ್ತು ಹಸಿ ಮೆಣಸಿನಕಾಯಿಯನ್ನು ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿನಲ್ಲಿ ತೆಗೆದುಕೊಂಡು, ಉಪ್ಪು ಮತ್ತು ಹುಳಿ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಹುರಿಯಿರಿ.
- ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಮೇಲೆ ಇಂಗು ಮತ್ತು ಕರಿಬೇವು ಸೇರಿಸಿ.
- ಜೊತೆಯಲ್ಲಿ ಅರೆದ ಮಿಶ್ರಣ ಸೇರಿಸಿ, ಒಂದು ಕುದಿ ಬರಿಸಿ.
- ಅನ್ನ, ದೋಸೆ ಅಥವಾ ರೊಟ್ಟಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ