ಗುರುವಾರ, ಜನವರಿ 26, 2023

Kayi haalina pulao recipe in Kannada | ಕಾಯಿ ಹಾಲಿನ ಅನ್ನ ಮಾಡುವ ವಿಧಾನ

 

Kayi haalina pulao recipe in Kannada

Kayi haalina pulao recipe in Kannada | ಕಾಯಿ ಹಾಲಿನ ಅನ್ನ ಮಾಡುವ ವಿಧಾನ

ಕಾಯಿ ಹಾಲಿನ ಪುಲಾವ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸಮತಿ ಅಕ್ಕಿ
  2. 1 ಕಪ್ ತೆಂಗಿನಕಾಯಿ ಹಾಲು 
  3. 1 ಕಪ್ ನೀರು
  4.  ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 2 ಟೇಬಲ್ ಚಮಚ ತುಪ್ಪ
  2. 1 ಸಣ್ಣ ಪುಲಾವ್ ಎಲೆ
  3. 5 - 6 ಲವಂಗ
  4. 1/2 ಬೆರಳುದ್ದ ಚಕ್ಕೆ 
  5. 1 ಟೀಸ್ಪೂನ್ ಜೀರಿಗೆ
  6. 2 ಏಲಕ್ಕಿ
  7. 1 ಚಕ್ರ ಮೊಗ್ಗು
  8. 1/2 ಟೀಸ್ಪೂನ್ ಸೋಂಪು
  9. 1 ಟೀಸ್ಪೂನ್ ಜಜ್ಜಿದ ಕರಿಮೆಣಸು 
  10. 2 ಟೇಬಲ್ ಚಮಚ ಗೋಡಂಬಿ
  11. 1 ಈರುಳ್ಳಿ ಉದ್ದವಾಗಿ ಸೀಳಿದ್ದು
  12. 1 - 2 ಹಸಿಮೆಣಸಿನಕಾಯಿ
  13. 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ಸಣ್ಣದಾಗಿ ಕತ್ತರಿಸಿದ್ದು
  14. 7 - 8 ಬೀನ್ಸ್ 
  15. 1 ಕ್ಯಾರಟ್ 
  16. 1 ಆಲೂಗಡ್ಡೆ 
  17. 1/2 ದೊಣ್ಣೆ ಮೆಣಸಿನಕಾಯಿ

ಕಾಯಿ ಹಾಲಿನ ಅನ್ನ ಮಾಡುವ ವಿಧಾನ:

  1. ಅಕ್ಕಿ ತೊಳೆದು, ನೀರು ಬಗ್ಗಿಸಿ ಪಕ್ಕಕ್ಕಿಡಿ. 
  2. ಕುಕ್ಕರ್ ನಲ್ಲಿ  ತುಪ್ಪ ತೆಗೆದುಕೊಂಡು ಬಿಸಿ ಮಾಡಿ. 
  3. ಅದಕ್ಕೆ  ಪುಲಾವ್ ಎಲೆ, ಚಕ್ಕೆ, ಲವಂಗ, ಚಕ್ರ ಮೊಗ್ಗು, ಜೀರಿಗೆ, ಏಲಕ್ಕಿ, ಸೋಂಪು ಮತ್ತು ಕರಿಮೆಣಸು ಸೇರಿಸಿ. 
  4. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. 
  5. ನಂತರ ಕತ್ತರಿಸಿದ ಈರುಳ್ಳಿ. ಗೋಡಂಬಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ.
  6. ಈರುಳ್ಳಿ ಬಾಡುವವರೆಗೆ ಹುರಿಯಿರಿ.
  7. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ಕತ್ತರಿಸಿದ ಶುಂಠಿ ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  8. ಕತ್ತರಿಸಿದ ತರಕಾರಿ ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ.
  9. ನಂತರ ತೊಳೆದಿಟ್ಟ ಅಕ್ಕಿ ಹಾಕಿ. 
  10. ತೆಂಗಿನಕಾಯಿ ಹಾಲು ಸೇರಿಸಿ. 
  11. ನೀರು ಹಾಕಿ.
  12. ಉಪ್ಪು ಸೇರಿಸಿ ಮಗುಚಿ. 
  13. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ. 
  14. ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ತೆಗೆದುಕೊಂಡು ಮೆಲ್ಲಗೆ ಕೆದಕಿ.
  15. ದಾಲ್, ಮೊಸರುಬಜ್ಜಿ, ಟೊಮೆಟೊ ಸಾಸ್ ಅಥವಾ ಉಪ್ಪಿನಕಾಯಿ ಜೊತೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...