Sorekai payasa recipe in Kannada | ಸೋರೆಕಾಯಿ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಕಪ್ ತುರಿದ ಸೋರೆಕಾಯಿ
- 2 ಲಿಂಬೆಹಣ್ಣಿನ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಕಪ್ ತೆಂಗಿನತುರಿ
- 1 ಟೇಬಲ್ ಚಮಚ ತುಪ್ಪ
- 5-6 ಗೋಡಂಬಿ
- 8-10 ಒಣದ್ರಾಕ್ಷಿ
- ಒಂದು ಏಲಕ್ಕಿ
- ಒಂದು ಚಿಟಿಕೆ ಉಪ್ಪು
ಸೋರೆಕಾಯಿ ಪಾಯಸ ಮಾಡುವ ವಿಧಾನ:
- ಸೋರೆಕಾಯಿಯನ್ನು ಸಿಪ್ಪೆ ತೆಗೆದು, ತೊಳೆದು ತುರಿದುಕೊಳ್ಳಿ.
- ಸೋರೆಕಾಯಿ ತುರಿಯನ್ನು ಒಂದು ಪಾತ್ರೆಗೆ ಹಾಕಿ, ಒಂದು ಚಿಟಿಕೆ ಉಪ್ಪು ಹಾಕಿ, 1 ಕಪ್ ನೀರು ಹಾಕಿ ಕುದಿಯಲು ಇಡೀ.
- ಕುದಿಯಲು ಪ್ರಾರಂಭವಾದ ಕೂಡಲೇ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ.
- ಆಮೇಲೆ ಬೆಲ್ಲ ಹಾಕಿ ಬೇಯಿಸುವುದನ್ನು ಮುಂದುವರೆಸಿ.
- ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಏಲಕ್ಕಿ ಮತ್ತು ತೊಳೆದ ಅಕ್ಕಿ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಬೇಕಾದಲ್ಲಿ ಕಾಯಿಹಾಲು ತೆಗೆದು ಹಾಕಬಹುದು.
- ಅದನ್ನು ಬೇಯಿಸಿದ ಸೋರೆಕಾಯಿಗೆ ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಸಿ. ಸ್ಟವ್ ಆಫ್ ಮಾಡಿ.
- ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದ ಸಮೇತ ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ