Halu holige or obbattu recipe in Kannada | ಹಾಲು ಹೋಳಿಗೆ ಅಥವಾ ಹಾಲೊಬ್ಬಟ್ಟು ಮಾಡುವ ವಿಧಾನ
ಹಾಲು ಅಥವಾ ಪಾಯಸಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 2 ಚಮಚ ಗಸಗಸೆ
- 1/4 ಕಪ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1/4 ಕಪ್ ತೆಂಗಿನ ತುರಿ
- 4 - 5 ಗೋಡಂಬಿ
- 4 - 5 ಬಾದಾಮಿ
- ಒಂದು ಚಿಟಿಕೆ ಕೇಸರಿ (ಬೇಕಾದಲ್ಲಿ)
- 1 ಕಪ್ ಹಾಲು
- 1/2 ಕಪ್ ನೀರು (ಅರೆಯಲು ಬಳಸಿದೆ)
- ಒಂದು ಏಲಕ್ಕಿ
ಪೂರಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಮೈದಾ ಹಿಟ್ಟು
- 1 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
ಹಾಲು ಅಥವಾ ಪಾಯಸ ಮಾಡುವ ವಿಧಾನ:
- ಗೋಡಂಬಿ ಮತ್ತು ಬಾದಾಮಿಯನ್ನು ಒಂದು ಘಂಟೆ ಕಾಲ ನೆನೆಸಿ. ಬಾದಾಮಿ ಸಿಪ್ಪೆ ತೆಗೆಯಿರಿ.
- ಒಂದು ಬಾಣಲೆಯಲ್ಲಿ ಗಸಗಸೆಯನ್ನು ಹುರಿಯಿರಿ.
- ಬಿಸಿ ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ.
- ಏಲಕ್ಕಿ, ನೆನೆಸಿದ ಗೋಡಂಬಿ, ಬಾದಾಮಿ ಮತ್ತು ತೆಂಗಿನ ತುರಿ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆದುಕೊಳ್ಳಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ.
- ಹಾಲು, ಸಕ್ಕರೆ ಮತ್ತು ಉಳಿದ ನೀರು ಸೇರಿಸಿ.
- ಬೇಕಾದಲ್ಲಿ ಕೇಸರಿ ಸೇರಿಸಿ.
- ಆಗಾಗ್ಯೆ ಮಗುಚುತ್ತಾ ಕುದಿಸಿ.
- ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ, ಪಕ್ಕಕ್ಕಿಡಿ.
ಪೂರಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾಗಿ ಕಲಸಿ.
- ಈಗ ನೆಲ್ಲಿಕಾಯಿ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ, ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ. ಇಲ್ಲವಾದಲ್ಲಿ ಪೂರಿ ಉಬ್ಬುವುದು. ನಮಗೆ ಪೂರಿ ಉಬ್ಬಬಾರದು.
- ಬಿಸಿಯಾದ ಎಣ್ಣೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಗರಿ ಗರಿಯಾಗುವವರೆಗೆ ಕಾಯಿಸಿ.
- ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ ತೆಗೆಯಿರಿ.
- ಬಿಸಿ ಆರಿದ ಮೇಲೆ, ಪೂರಿಗಳನ್ನು ಪ್ಲೇಟ್ ನಲ್ಲಿ ಜೋಡಿಸಿ, ಮೇಲಿನಿಂದ ಹಾಲು ಅಥವಾ ಪಾಯಸವನ್ನು ಸುರಿಯಿರಿ.
- ಐದರಿಂದ ಹತ್ತು ನಿಮಿಷದ ನಂತ್ರ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ