Sorekai bol koddel or sambar recipe in Kannada | ಸೋರೆಕಾಯಿ ಬೋಳು ಕೊದ್ದೆಲ್ ಅಥವಾ ಸಾಂಬಾರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಸೋರೆಕಾಯಿ
- 1/4 ಕಪ್ ತೊಗರಿಬೇಳೆ
- 1 - 2 ಹಸಿಮೆಣಸು
- 2 ಟೀಸ್ಪೂನ್ ಬೆಲ್ಲ
- ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 1 ಚಮಚ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ
- 2 ಟೀಸ್ಪೂನ್ ಎಣ್ಣೆ
- 1/4 ಟೀಸ್ಪೂನ್ ಇಂಗು
ಸೋರೆಕಾಯಿ ಬೋಳು ಕೊದ್ದೆಲ್ ಅಥವಾ ಸಾಂಬಾರ್ ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ಅಗತ್ಯವಿದ್ದಷ್ಟು ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ.
- ಮುಚ್ಚಳ ಮುಚ್ಚಿ ಮೆತ್ತಗೆ ಬೇಯಿಸಿ.
- ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ.
- ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಸೋರೆಕಾಯಿ ಮತ್ತು ಉಪ್ಪು ಹಾಕಿ ಸೋರೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
- ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಬೆಲ್ಲ, ಹುಣಿಸೆರಸ ಮತ್ತು ಅಗತ್ಯವಿದ್ದಲ್ಲಿ ಉಪ್ಪು ಸೇರಿಸಿ.
- ಸಾರಿನಪುಡಿ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ.
- ಅಗತ್ಯವಿದ್ದಲ್ಲಿ ನೀರು ಸೇರಿಸಿ ಕುದಿಯಲು ಇಡಿ.
- ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕುದ್ದ ಮೇಲೆ ಸ್ಟವ್ ಆಫ್ ಮಾಡಿ.
- ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ