ಮಂಗಳವಾರ, ಮಾರ್ಚ್ 27, 2018

Genasina chutney recipe in Kannada | ಗೆಣಸಿನ ಚಟ್ನಿ ಮಾಡುವ ವಿಧಾನ

Genasina chutney recipe in Kannada

Genasina chutney recipe in Kannada | ಗೆಣಸಿನ ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಒಂದು ಸಣ್ಣ ಗಾತ್ರದ ಗೆಣಸು
  2. 1/2 ಕಪ್ ತೆಂಗಿನ ತುರಿ
  3. 1 - 2 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಉದ್ದಿನ ಬೇಳೆ
  5. ದೊಡ್ಡ ಚಿಟಿಕೆ ಇಂಗು
  6. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  7. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  8. 1/2 ಟೀಸ್ಪೂನ್ ಅಡುಗೆ ಎಣ್ಣೆ
  9. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 4 ಕರಿಬೇವಿನ ಎಲೆ 
  4. ಚಿಟಿಕೆ ಇಂಗು
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಗೆಣಸಿನ ಚಟ್ನಿ ಮಾಡುವ ವಿಧಾನ:

  1. ಗೆಣಸನ್ನು ಸ್ವಚ್ಛ ಮಾಡಿ ತುರಿದಿಟ್ಟುಕೊಳ್ಳಿ. 
  2. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ ಮತ್ತು ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  3. ಕೊನೆಯಲ್ಲಿ ಇಂಗು ಸೇರಿಸಿ ಹುರಿಯಿರಿ. 
  4. ಕೂಡಲೇ ತುರಿದಿಟ್ಟ ಗೆಣಸು ಹಾಕಿ ಒಂದೆರಡು ನಿಮಿಷ ಹುರಿಯಿರಿ. ಬೇಕಾದಲ್ಲಿ ಹುರಿಯಬಹುದು ಅಥವ ಹಾಗೆ ಹಾಕಬಹುದು. 
  5. ತೆಂಗಿನ ತುರಿ ಸೇರಿಸಿ, ಮಗುಚಿ, ಸ್ಟವ್ ಆಫ್ ಮಾಡಿ. 
  6. ಉಪ್ಪು, ಹುಣಿಸೇಹಣ್ಣು ಮತ್ತು ಬೆಲ್ಲ ಸೇರಿಸಿ. 
  7. ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  8. ಒಣಮೆಣಸಿನಕಾಯಿ, ಇಂಗು, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...