Rave payasa recipe in Kannada | ರವೇ ಪಾಯಸ ಮಾಡುವ ವಿಧಾನ
Rave payasa video
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 4 ಟೇಬಲ್ ಚಮಚ ಉಪ್ಪಿಟ್ಟು ರವೇ
- 2 - 2.5 ಕಪ್ ಹಾಲು
- 1 ಕಪ್ ನೀರು
- 6 ಟೇಬಲ್ ಚಮಚ ಸಕ್ಕರೆ
- 2 ಟೀಸ್ಪೂನ್ ತುಪ್ಪ
- 5-6 ಗೋಡಂಬಿ
- 8-10 ಒಣದ್ರಾಕ್ಷಿ
- ಒಂದು ಚಿಟಿಕೆ ಏಲಕ್ಕಿ ಪುಡಿ
ರವೇ ಪಾಯಸ ಮಾಡುವ ವಿಧಾನ:
- ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ.
- ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು ತೆಗೆದಿಡಿ.
- ನಂತರ ಅದೇ ಬಾಣಲೆಗೆ ರವೇಯನ್ನು ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ.
- ನೀರನ್ನು ಸೇರಿಸಿ ಮಗುಚಿ.
- ಕುದಿಯಲು ಪ್ರಾರಂಭವಾದ ಕೂಡಲೇ ಉರಿ ಕಡಿಮೆ ಮಾಡಿ, ಒಂದು ನಿಮಿಷ ಬೇಯಿಸಿ.
- ನಂತರ ಹಾಲನ್ನು ಸೇರಿಸಿ.
- ಸಕ್ಕರೆಯನ್ನೂ ಸೇರಿಸಿ.
- ಏಲಕ್ಕಿ ಪುಡಿ ಮತ್ತು ಕೇಸರಿ (ಬೇಕಾದಲ್ಲಿ) ಸೇರಿಸಿ ಕುದಿಸಿ.
- ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು, ಬೇಕಾದಲ್ಲಿ ಹಾಲು ಅಥವಾ ನೀರು ಸೇರಿಸಬಹುದು. ಸಕ್ಕರೆ ಕರಗಿದ ಮೇಲೆ ಸ್ಟವ್ ಸ್ಟೋವ್ ಆಫ್ ಮಾಡಿ.
- ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ