ಸೋಮವಾರ, ಏಪ್ರಿಲ್ 2, 2018

Cabbage ricebath recipe in Kannada | ಕೋಸು ರೈಸ್ ಬಾತ್ ಮಾಡುವ ವಿಧಾನ

Cabbage ricebath recipe in Kannada

Cabbage ricebath recipe in Kannada | ಕೋಸು ರೈಸ್ ಬಾತ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

 1. 1 ಕಪ್ ಸೋನಾ ಮಸೂರಿ ಅಕ್ಕಿ
 2. 2 ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು
 3. 4 ಟೇಬಲ್ ಚಮಚ ಅಡುಗೆ ಎಣ್ಣೆ 
 4. 1/2 ಚಮಚ ಸಾಸಿವೆ 
 5. 1 ಟೀಸ್ಪೂನ್ ಉದ್ದಿನ ಬೇಳೆ 
 6. 1 ಟೀಸ್ಪೂನ್ ಕಡಲೆಬೇಳೆ 
 7. 4 - 5 ಕರಿಬೇವಿನ ಎಲೆ 
 8. 7 - 8 ಗೋಡಂಬಿ
 9. 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
 10. 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
 11. 1/4 ಟೀಸ್ಪೂನ್ ಅರಶಿನ ಪುಡಿ
 12. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

 1. 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
 2. 2 ಟೀಸ್ಪೂನ್ ಉದ್ದಿನ ಬೇಳೆ
 3. 2 ಟೀಸ್ಪೂನ್ ಕಡಲೆಬೇಳೆ 
 4. 4 ಟೀಸ್ಪೂನ್ ಕೊತ್ತಂಬರಿ ಬೀಜ
 5. ಅರ್ಧ ಬೆರಳುದ್ದ ಚಕ್ಕೆ 
 6. 5 - 6 ಲವಂಗ 
 7. 1/4 ಟೀಸ್ಪೂನ್ ಗಸಗಸೆ
 8. 2 - 4 ಟೇಬಲ್ ಚಮಚ ತೆಂಗಿನ ತುರಿ

ಕೋಸು ರೈಸ್ ಬಾತ್ ಮಾಡುವ ವಿಧಾನ:

 1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
 2. ಎಲೆಕೋಸನ್ನು ತೊಳೆದು, ಸಣ್ಣಗೆ ಕತ್ತರಿಸಿಟ್ಟು ಕೊಳ್ಳಿ. 
 3. ಮಸಾಲೆ ಪುಡಿಗೆ, ಒಂದು ಬಾಣಲೆಯಲ್ಲಿ 2 - 4 ಕೆಂಪು ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ, 2 ಟೀಸ್ಪೂನ್ ಕಡಲೆಬೇಳೆ, 4 ಟೀಸ್ಪೂನ್ ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆ ಹುರಿಯಿರಿ. 
 4. ಅದಕ್ಕೆ ಚಕ್ಕೆ, ಲವಂಗ ಮತ್ತು ಗಸಗಸೆ ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ. 
 5. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. ಇದರ ಬದಲಾಗಿ ವಾಂಗೀಬಾತ್ ಪುಡಿ ಸಹ ಉಪಯೋಗಿಸಬಹುದು. 
 6. ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 
 7. ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬೇಕಾದಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಬಹುದು. 
 8. ಅರಿಶಿನ ಮತ್ತು ಇಂಗನ್ನು ಸೇರಿಸಿ. 
 9. ನಂತರ ಹೆಚ್ಚಿದ ಎಲೆಕೋಸು ಒಂದೆರಡು ನಿಮಿಷ ಹುರಿಯಿರಿ. 
 10. ನಂತರ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ. 
 11. ಅಗತ್ಯವಿದ್ದಷ್ಟು ನೀರು ಸೇರಿಸಿ ಕೋಸನ್ನು ಮೆತ್ತಗೆ ಬೇಯಿಸಿಕೊಳ್ಳಿ. 
 12. ಕೊನೆಯಲ್ಲಿ ಮಸಾಲೆ ಪುಡಿ ಹಾಕಿ. (ವಾಂಗೀಬಾತ್ ಪೌಡರ್ ಹಾಕುವುದಾದಲ್ಲಿ ಸ್ವಲ್ಪ ಕಾಯಿ ತುರಿಯನ್ನೂ ಹಾಕಿ). ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
 13. ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...