Boodu kumbalakai thirulina sasive in kannada | ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ
ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 kg ಕುಂಬಳಕಾಯಿ ಯಿಂದ ತೆಗೆದ ತಿರುಳು
- 1/4 ಟೀಸ್ಪೂನ್ ಸಾಸಿವೆ
- 1/4 ಕಪ್ ತೆಂಗಿನತುರಿ
- 1/2 ಕಪ್ ಮೊಸರು
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
ಬೂದು ಕುಂಬಳಕಾಯಿ ತಿರುಳಿನ ಸಾಸಿವೆ ಮಾಡುವ ವಿಧಾನ:
- ಬೂದು ಕುಂಬಳಕಾಯಿ ಯನ್ನು ಕತ್ತರಿಸಿ, ತಿರುಳನ್ನು ತೆಗೆಯಿರಿ.
- ಬೀಜ ಬೇರ್ಪಡಿಸಿ, ತಿರುಳನ್ನು ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಬೇಯಿಸಿ.
- ಬಿಸಿ ಆರಿದ ಮೇಲೆ ಬೇಯಿಸಿದ ತಿರುಳು ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.
- ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಅಗತ್ಯವಿದ್ದಷ್ಟು ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ.
- ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ