ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಒಣದ್ರಾಕ್ಷಿ
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- ದೊಡ್ಡ ನಿಂಬೆಹಣ್ಣಿನ ಗಾತ್ರದ ಬೆಲ್ಲ
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 3 - 6 ಒಣ ಮೆಣಸಿನಕಾಯಿ
- 1 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಮೆಂತ್ಯ
- 3 ಟೀಸ್ಪೂನ್ ಎಳ್ಳು
- 5 - 6 ಕರಿಬೇವಿನ ಎಲೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಒಣಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ
- 1 ಚಿಟಿಕೆ ಅರಿಶಿನ ಪುಡಿ
- 1 ಚಿಟಿಕೆ ಇಂಗು
- 4 ಟೀಸ್ಪೂನ್ ಅಡುಗೆ ಎಣ್ಣೆ
ಒಣದ್ರಾಕ್ಷಿ ಗೊಜ್ಜು ಮಾಡುವ ವಿಧಾನ:
- ಒಂದು ಬಾಣಲೆಯನ್ನು ಬಿಸಿ ಮಾಡಿ. 1 ಚಮಚ ಎಣ್ಣೆ ಹಾಕಿ. ಉದ್ದಿನ ಬೇಳೆ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಮೆಂತೆ, ಒಣಮೆಣಸು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಉದ್ದಿನಬೇಳೆ ಕಂದುಬಣ್ಣಕ್ಕೆ ತಿರುಗಿದ ಮೇಲೆ ಎಳ್ಳನ್ನು ಹಾಕಿ ಹುರಿಯಿರಿ.
- ನಂತರ ಕರಿಬೇವನ್ನು ಹಾಕಿ ಹುರಿಯಿರಿ.
- ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ.
- ನಂತರ ಅದೇ ಬಾಣಲೆಗೆ 2 ಟೇಬಲ್ ಚಮಚ ಎಣ್ಣೆ ಹಾಕಿ, ಒಣಮೆಣಸು, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಇಂಗು ಮತ್ತು ಅರಿಶಿನ ಪುಡಿ ಸೇರಿಸಿ.
- ನಂತರ ಒಣದ್ರಾಕ್ಷಿ ಹಾಕಿ, ಉಬ್ಬುವವರೆಗೆ ಹುರಿಯಿರಿ.
- ಅದಕ್ಕೆ ಉಪ್ಪು, ಹುಣಿಸೆಹಣ್ಣಿನ ರಸ, ಬೆಲ್ಲ ಮತ್ತು ಅರ್ಧ ಲೋಟ ನೀರು ಹಾಕಿ. ಒಂದೈದು ನಿಮಿಷ ಬೇಯಿಸಿ.
- ಬೇಯಿಸಿದ ದ್ರಾಕ್ಷಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಬೆಲ್ಲ ಹೊಂದಿಸಿ. ಬೇಕಾದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ.
- ನಂತರ ಅನ್ನ ಅಥವಾ ಚಪಾತಿ ಜೊತೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ