Coconut and milk powder ladoo recipe in Kannada | ಕೊಬ್ಬರಿ ಮತ್ತು ಹಾಲಿನಪುಡಿಯ ಲಾಡೂ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಹಾಲಿನ ಪುಡಿ
- 3/4 ಕಪ್ ಕೊಬ್ಬರಿ ಪುಡಿ ಅಥವಾ ತೆಂಗಿನತುರಿ
- 1/4 ಕಪ್ ಕೊಬ್ಬರಿ ಪುಡಿ ಉದುರಿಸಲು
- 1/2 - 1/3 ಕಪ್ ಸಕ್ಕರೆ
- 1/3 ಕಪ್ ಹಾಲು
- 1 ಟೇಬಲ್ ಚಮಚ ತುಪ್ಪ
- 1 ಟೇಬಲ್ ಚಮಚ ಕತ್ತರಿಸಿದ ಗೋಡಂಬಿ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಕೊಬ್ಬರಿ ಮತ್ತು ಹಾಲಿನಪುಡಿಯ ಲಾಡೂ ಮಾಡುವ ವಿಧಾನ:
- ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ತುಪ್ಪ, ಹಾಲು ಮತ್ತು ಸಕ್ಕರೆ ತೆಗೆದುಕೊಂಡು ಬಿಸಿ ಮಾಡಲು ಇಡಿ. ಒಮ್ಮೆ ಮಗುಚಿ.
- ಕೂಡಲೇ ಹಾಲಿನಪುಡಿ ಸೇರಿಸಿ ಮಂದ ಉರಿಯಲ್ಲಿ ಮಗುಚುತ್ತಾ ಇರಿ.
- ಹಾಲಿನಪುಡಿ ಗಂಟಿಲ್ಲದಂತೆ ಕರಗಿ ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಕೊಬ್ಬರಿ ಪುಡಿ ಹಾಕಿ. ತೆಂಗಿನತುರಿ ಹಾಕುವುದಾದಲ್ಲಿ ಮಿಕ್ಸಿಯಲ್ಲಿ ಪುಡಿ ಮಾಡಿ ಹಾಕಿ.
- ಸಣ್ಣ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
- ಸ್ವಲ್ಪ ಸಮಯದಲ್ಲಿ ಮೆತ್ತಗಿನ ಮುದ್ದೆಯಾಗುತ್ತದೆ.
- ಗೋಡಂಬಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಸ್ವಲ್ಪ ಮಿಶ್ರಣವನ್ನು ತೆಗೆದು ಉಂಡೆ ಮಾಡಿ. ನಂತ್ರ ಕೊಬ್ಬರಿ ಪುಡಿಯಲ್ಲಿ ಹೊರಳಾಡಿಸಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ.
- ಹೆಚ್ಚು ದಿನ ಇಡಬೇಕಾದಲ್ಲಿ ಫ್ರಿಡ್ಜ್ ನಲ್ಲಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ