Chiroti recipe in Kannada | ಚಿರೋಟಿ ಮಾಡುವ ವಿಧಾನ
Chiroti video
ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೈದಾ ಹಿಟ್ಟು
- 1/4 ಕಪ್ ಚಿರೋಟಿ ರವೇ
- 1 ಟೇಬಲ್ ಚಮಚ ತುಪ್ಪ (ಹೆಚ್ಚು ಗರಿಗರಿ ಬೇಕಾದಲ್ಲಿ ಹೆಚ್ಚು ತುಪ್ಪ ಹಾಕಿ)
- ಉಪ್ಪು ರುಚಿಗೆ ತಕ್ಕಷ್ಟು
- ಸಕ್ಕರೆ ಪುಡಿ ಕೊನೆಯಲ್ಲಿ ಉದುರಿಸಲು
- ಸಿಹಿ ಹಾಲು ಅಥವಾ ಬಾದಾಮಿ ಹಾಲು (ಬೇಕಾದಲ್ಲಿ)
- ಕರಿಯಲು ಎಣ್ಣೆ
ಹಿಟ್ಟು ಮತ್ತು ತುಪ್ಪದ ಪೇಸ್ಟ್ ಗೆ ಬೇಕಾಗುವ ಪದಾರ್ಥಗಳು:
- 3 ಟೇಬಲ್ ಚಮಚ ಅಕ್ಕಿಹಿಟ್ಟು ಅಥವಾ ಮೈದಾ ಹಿಟ್ಟು ಅಥವಾ ಕಾರ್ನ್ ಫ್ಲೋರ್
- 3 ಟೇಬಲ್ ಚಮಚ ತುಪ್ಪ ಅಥವಾ ಪೇಸ್ಟ್ ಮಾಡಲು ಬೇಕಾದಷ್ಟು
ಚಿರೋಟಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿರೋಟಿ ರವೇ, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ೩೦ ನಿಮಿಷ ನೆನೆಯಲು ಬಿಡಿ.
- ನಂತ್ರ ೫ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
- ಅಕ್ಕಿಹಿಟ್ಟು ಮತ್ತು ತುಪ್ಪದ ಪೇಸ್ಟ್ ಮಾಡಿಕೊಳ್ಳಿ. ಅಕ್ಕಿಹಿಟ್ಟು ನಯವಾಗಿರಬೇಕು. ಇಲ್ಲವಾದಲ್ಲಿ ಮೈದಾ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಬಳಸಿ.
- ಎಲ್ಲ ಉಂಡೆಗಳನ್ನು ಲಟ್ಟಿಸಿಟ್ಟುಕೊಳ್ಳಿ.
- ನಂತರ ಲಟ್ಟಿಸಿದ ಒಂದು ಚಪಾತಿಯ ಮೇಲೆ ಹಿಟ್ಟು ಮತ್ತು ತುಪ್ಪದ ಪೇಸ್ಟ್ ಹಚ್ಚಿ. ಇನ್ನೊಂದು ಚಪಾತಿಯನ್ನಿಡಿ. ಪುನಃ ಪೇಸ್ಟ್ ಹಚ್ಚಿ. ಹೀಗೆ ೫ ಚಪಾತಿಗಳನ್ನಿಟ್ಟು ಪೇಸ್ಟ್ ಹಚ್ಚಿ.
- ಆಮೇಲೆ ಅವುಗಳನ್ನು ಸುರುಳಿಯಾಕಾರಕ್ಕೆ ಸುತ್ತಿ.
- ಚಾಕುವಿನಿಂದ ಏಳೆಂಟು ತುಂಡುಗಳಾಗಿ ಕತ್ತರಿಸಿ. ೧೫ ನಿಮಿಷ ಬಿಡಿ.
- ನಂತ್ರ ಪೂರಿಯಷ್ಟು ದೊಡ್ಡ ಚಿರೋಟಿ ಲಟ್ಟಿಸಿ.
- ಬಿಸಿಯಾದ ಎಣ್ಣೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ.
- ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಮೇಲಿನಿಂದ ಸಕ್ಕರೆ ಪುಡಿಯನ್ನುಉದುರಿಸಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ.
- ಸಕ್ಕರೆ ಪಾಕವನ್ನು ಸಹ ಹಾಕಬಹುದು. ಇಲ್ಲವೇ ಹಾಲಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ