Sihi kumbalakai chutney recipe in Kannada | ಸಿಹಿಕುಂಬಳಕಾಯಿ ಚಟ್ನಿ ಮಾಡುವ ವಿಧಾನ
ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 kg ಚೀನಿಕಾಯಿ ಅಥವಾ ಸಿಹಿ ಕುಂಬಳಕಾಯಿ
- 2-4 ಒಣ ಮೆಣಸಿನಕಾಯಿ
- 1 ಟಿಸ್ಪೂನ್ ಎಳ್ಳು
- 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡ್ಲೆಬೇಳೆ
- ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
- 1/2 ಟಿಸ್ಪೂನ್ ಬೆಲ್ಲ
- 1/2 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನಬೇಳೆ
- 3 - 4 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಸಿಹಿಕುಂಬಳಕಾಯಿ ಚಟ್ನಿ ಮಾಡುವ ವಿಧಾನ:
- ಚೀನಿಕಾಯಿ ಅಥವಾ ಸಿಹಿ ಕುಂಬಳಕಾಯಿಯನ್ನು ಸಿಪ್ಪೆ ತೆಗೆದು, ತೊಳೆದು ಕತ್ತರಿಸಿಟ್ಟು ಕೊಳ್ಳಿ.
- ಕತ್ತರಿಸಿದ ಸಿಹಿ ಕುಂಬಳಕಾಯಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಸ್ವಲ್ಪ ನೀರನ್ನು ಕುಕ್ಕರ್ ಗೆ ಹಾಕಿ ಬೇಯಿಸಿ.
- ಒಂದು ಬಾಣಲೆ ಬಿಸಿಮಾಡಿ, ಅದಕ್ಕೆ ಕೆಂಪು ಮೆಣಸಿನಕಾಯಿ ಮತ್ತು ಎಳ್ಳನ್ನು ಹಾಕಿ ಹುರಿಯಿರಿ. ಕಡ್ಲೆಬೇಳೆ ಹಾಕುವುದಾದಲ್ಲಿ ಅದನ್ನು ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ.
- ಬೇಯಿಸಿದ ಸಿಹಿ ಕುಂಬಳಕಾಯಿ ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿ, ಹುರಿದ ಪದಾರ್ಥಗಳು ಮತ್ತು ಹುರಿಗಡಲೆ (ಕಡ್ಲೆಬೇಳೆ ಹಾಕದಿದ್ದಲ್ಲಿ) ಸೇರಿಸಿ. ನುಣ್ಣನೆ ಅರೆಯಿರಿ.
- ಎಣ್ಣೆ, ಸಾಸಿವೆ, ಕರಿಬೇವು ಮತ್ತು ಉದ್ದಿನಬೇಳೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನ ಅಥವಾ ದೋಸೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ