Kara sev mixture recipe in Kannada | ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ
ವಿಡಿಯೋ ವೀಕ್ಷಿಸಲು ಈ ಚಿತ್ರದ ಮೇಲೆ ಕ್ಲಿಕ್ಕಿಸಿ
ಸೇವ್ ಮಾಡಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಕಡ್ಲೆಹಿಟ್ಟು
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1/2 ಟೀಸ್ಪೂನ್ ಓಮ ಕಾಳು ಅಥವಾ ಅಜವೈನ್
- 1/2 ಟೀಸ್ಪೂನ್ ಉಪ್ಪು
- ದೊಡ್ಡ ಚಿಟಿಕೆ ಇಂಗು
- 1 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಖಾರ ಸೇವ್ ಕಾಯಿಸಲು
ಮಿಕ್ಸ್ಚರ್ ಮಾಡಲು ಬೇಕಾಗುವ ಪದಾರ್ಥಗಳು:
- 4 ಟೇಬಲ್ ಚಮಚ ಕಡಲೆಕಾಯಿ ಅಥವಾ ಶೇಂಗಾ
- 4 ಟೇಬಲ್ ಚಮಚ ಹರಿಗಡಲೇ ಅಥವಾ ಪುಟಾಣಿ
- 1 ಎಸಳು ಕರಿಬೇವು
- 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- 1 ಟೀಸ್ಪೂನ್ ಎಣ್ಣೆ
- ಉಪ್ಪು ನಿಮ್ಮ ರುಚಿಗೆ ತಕ್ಕಂತೆ
- 7 - 8 ಗೋಡಂಬಿ (ಬೇಕಾದಲ್ಲಿ)
- 1 ಟೇಬಲ್ ಚಮಚ ಒಣಗಿದ ತೆಂಗಿನಕಾಯಿ ಚೂರುಗಳು (ಬೇಕಾದಲ್ಲಿ)
ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ:
- ಓಮ ಅಥವಾ ಅಜವೈನವನ್ನು ಜಜ್ಜಿ ಸಣ್ಣ ಪುಡಿ ಮಾಡಿ.
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಜಜ್ಜಿದ ಓಮ ಮತ್ತು ಉಪ್ಪನ್ನು ಹಾಕಿ.
- 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪ ನೀರು ಹಾಕಿ ದಪ್ಪ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ.
- ಸಣ್ಣ ಸಣ್ಣ ತೂತುಗಳಿರುವ ಸೇವ್ ಮಾಡುವ ಅಚ್ಚಿಗೆ ಹಿಟ್ಟನ್ನು ಹಾಕಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬಿಸಿ ಎಣ್ಣೆಗೆ ನೇರವಾಗಿ ಒತ್ತಿ.
- ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಬಿಸಿ ಆರಿದ ಮೇಲೆ ಸ್ವಲ್ಪ ಪುಡಿ ಮಾಡಿಟ್ಟುಕೊಳ್ಳಿ.
- ಇನ್ನೊಂದು ಬಾಣಲೆಯಲ್ಲಿ ನೆಲಗಡಲೆ ಅಥವಾ ಶೇಂಗಾವನ್ನು ಹುರಿಯಿರಿ. ಕರಿಬೇವನ್ನು ಸೇರಿಸಿ ಹುರಿಯಿರಿ.
- ನೆಲಗಡಲೆ ಹುರಿದ ಮೇಲೆ ಹುರಿಗಡಲೆ ಮತ್ತು ಅಚ್ಚಖಾರದ ಪುಡಿ ಸೇರಿಸಿ, ಸ್ಟವ್ ಆಫ್ ಮಾಡಿ.
- ಒಮ್ಮೆ ಮಗುಚಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಂದು ಚಿಟಿಕೆ ಉಪ್ಪು ಸಾಕಾಗಬಹುದು.
- ಇದನ್ನು ಪುಡಿ ಮಾಡಿದ ಸೇವ್ ಗೆ ಸೇರಿಸಿ. ಚೆನ್ನಾಗಿ ಕಲಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ