Bendekai palya recipe in Kannada | ಬೆಂಡೆಕಾಯಿ ಪಲ್ಯ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕೆಜಿ ಬೆಂಡೆಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 2 - 3 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಒಣ ಮೆಣಸಿನಕಾಯಿ
- 1 - 2 ಹಸಿರು ಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ
- 2 - 3 ಎಸಳು ಬೆಳ್ಳುಳ್ಳಿ ಅಥವಾ ಚಿಟಿಕೆ ಇಂಗು
- 1 ಮಧ್ಯಮ ಗಾತ್ರದ ಈರುಳ್ಳಿ
- 1 ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ಟೇಬಲ್ ಚಮಚ ಮೊಸರು ಅಥವಾ 1 ಟೇಬಲ್ ಚಮಚ ನಿಂಬೆರಸ
- ಉಪ್ಪು ರುಚಿಗೆ ತಕ್ಕಷ್ಟು
ಬೆಂಡೆಕಾಯಿ ಪಲ್ಯ ಮಾಡುವ ವಿಧಾನ:
- ಬೆಂಡೆಕಾಯಿಯನ್ನು ತೊಳೆದು, ಕತ್ತರಿಸಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೂ ಕತ್ತರಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಒಣ ಮೆಣಸಿನಕಾಯಿ ಹಾಕಿ.
- ನಂತರ ಕರಿಬೇವಿನ ಎಲೆ, ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ.
- ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
- ನಂತ್ರ ಕತ್ತರಿಸಿದ ಬೆಂಡೆಕಾಯಿ ಹಾಕಿ ದೊಡ್ಡ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ.
- ಉರಿ ಕಡಿಮೆ ಮಾಡಿ, ಅರಿಶಿನ ಮತ್ತು ಮೊಸರು ಹಾಕಿ.
- ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ.
- ಕೊನೆಯಲ್ಲಿ ಉಪ್ಪು ಹಾಕಿ, ಚೆನ್ನಾಗಿ ಮಗುಚಿ ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
Tumba sarala mattu sulabhavagi tilisiddiri. dhannyvadagalu.
ಪ್ರತ್ಯುತ್ತರಅಳಿಸಿ