Bili holige recipe in Kannada | ಬಿಳಿ ಹೋಳಿಗೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೈದಾ ಹಿಟ್ಟು (8 ಚಪಾತಿ ಗಾಗುವಷ್ಟು)
- 4 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ತುಂಬಿಸಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿಹಿಟ್ಟು
- 2 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ, ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
- 1 ಟೀಸ್ಪೂನ್ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಬಿಳಿ ಹೋಳಿಗೆ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ಉಪ್ಪನ್ನು ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
- ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಪುನಃ ಕಲಸಿ, ಮುಚ್ಚಿಡಿ.
- ಒಂದು ಬಾಣಲೆಯಲ್ಲಿ ನೀರು, ಎಣ್ಣೆ ಮತ್ತು ಉಪ್ಪನ್ನು ಹಾಕಿ ಕುದಿಯಲು ಇಡಿ.
- ಕುದಿಯಲು ಪ್ರಾರಂಭವಾದ ಕೂಡಲೇ ಅಕ್ಕಿಹಿಟ್ಟನ್ನು ಹಾಕಿ ಒಂದೆರಡು ನಿಮಿಷ ಮಗುಚಿ.
- ಸ್ಟವ್ ಆಫ್ ಮಾಡಿ. ಬಿಸಿ ಆರುವವರೆಗೆ ಮುಚ್ಚಿಡಿ.
- ಬಿಸಿ ಆರಿದ ಮೇಲೆ ಕೈಗೆ ಎಣ್ಣೆ ಮುಟ್ಟಿಸಿಕೊಂಡು ಚೆನ್ನಾಗಿ ನಾದಿ. ಗಮನಿಸಿ ಹಿಟ್ಟು ಮೃದುವಾಗಿರಬೇಕು.
- ಈಗ ಬಿಳಿ ಹೋಳಿಗೆ ಮಾಡಲು, ಎಣ್ಣೆ ಅಥವಾ ಹಿಟ್ಟನ್ನು ಮುಟ್ಟಿಕೊಂಡು, ಒಂದುಸಣ್ಣನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಚಪ್ಪಟೆ ಮಾಡಿ. ಅದರೊಳಗೆ ಒಂದು ಅಕ್ಕಿ ಹಿಟ್ಟಿನ ಉಂಡೆಯನ್ನು ಇರಿಸಿ.
- ತುದಿಗಳನ್ನು ಒಟ್ಟಿಗೆ ತಂದು ರವೆಯನ್ನು ಒಳಗೆ ಸೇರಿಸಿ.
- ಸಾಕಷ್ಟು ಎಣ್ಣೆ ಅಥವಾ ಗೋಧಿ ಹಿಟ್ಟನ್ನು ಬಳಸಿ ಅಕ್ಕಿ ಹಿಟ್ಟು ಸೇರಿಸಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
- ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಹೋಳಿಗೆಯನ್ನು ತವಾ ಮೇಲೆ ಹಾಕಿ.
- ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಯಾವುದೇ ಗೊಜ್ಜು ಅಥವಾ ಸೀಕರಣೆ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ