Avalakki unde recipe in Kannada | ಅವಲಕ್ಕಿ ಉಂಡೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೀಡಿಯಂ ಅವಲಕ್ಕಿ
- 1/4 ಕಪ್ ಸಕ್ಕರೆ
- 1/2 ಕಪ್ ಕೊಬ್ಬರಿ ತುರಿ
- 2 - 3 ಟೇಬಲ್ ಕುದಿಸಿದ ಹಾಲು
- 2 ಟೇಬಲ್ ಚಮಚ ತುಪ್ಪ
- 4 - 5 ಗೋಡಂಬಿ ಚೂರು ಮಾಡಿದ್ದು (ಬೇಕಾದಲ್ಲಿ)
- 1 ಟೇಬಲ್ ಚಮಚ ಒಣ ದ್ರಾಕ್ಷಿ
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಅವಲಕ್ಕಿ ಉಂಡೆ ಮಾಡುವ ವಿಧಾನ:
- ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದು ಎತ್ತಿಡಿ.
- ನಂತರ ಅದೇ ಬಾಣಲೆಗೆ ಅವಲಕ್ಕಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
- ನಂತರ ತೆಂಗಿನ ತುರಿಯನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. ಬಿಸಿ ಆರಲು ಬಿಡಿ.
- ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ.
- ಹುರಿದ ಅವಲಕ್ಕಿ ಮತ್ತುಕೊಬ್ಬರಿ ತುರಿಯನ್ನು ಹಾಕಿ ಪುಡಿ ಮಾಡಿ.
- ಒಂದು ಬಟ್ಟಲಿಗೆ ಹಾಕಿ. ಏಲಕ್ಕಿ ಪುಡಿ ಮತ್ತು ಹಾಲನ್ನು ಚಿಮುಕಿಸಿ ಚೆನ್ನಾಗಿ ಕಲಸಿ.
- ಉಂಡೆಗಳನ್ನು ಮಾಡಿ. ಸವಿದು ಆನಂದಿಸಿ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿnamaskara
ಪ್ರತ್ಯುತ್ತರಅಳಿಸಿnaanu try madiHe...Tumba channgi bantu...All thanks to u...