Mysore style kodubale recipe in Kannada | ಕೋಡುಬಳೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
- 1/4 ಕಪ್ ಚಿರೋಟಿ ರವೇ ಅಥವಾ ಮೈದಾ ಹಿಟ್ಟು
- 1/4 ಕಪ್ ತೆಂಗಿನ ತುರಿ
- 3 - 6 ಕೆಂಪು ಮೆಣಸಿನಕಾಯಿ ಅಥವಾ 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/2 ಟೀಸ್ಪೂನ್ ಓಂಕಾಳು
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- ಒಂದು ದೊಡ್ಡ ಚಿಟಿಕೆ ಇಂಗು
- 1 ಎಸಳು ಕರಿಬೇವು
- 2.5 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಕೋಡುಬಳೆ ಕಾಯಿಸಲು
ಕೋಡುಬಳೆ ಮಾಡುವ ವಿಧಾನ:
- ಅಕ್ಕಿ ಹಿಟ್ಟು ಮತ್ತು ಚಿರೋಟಿ ರವೇ (ಅಥವಾ ಮೈದಾ ಹಿಟ್ಟ) ನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ.
- ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ .
- ನಂತರ ತೆಂಗಿನ ತುರಿ, ಅಚ್ಚಖಾರದ ಪುಡಿ (ಅಥವಾ ಕೆಂಪು ಮೆಣಸಿನಕಾಯಿ), ಕರಿಬೇವು, ಇಂಗು ಮತ್ತು ಉಪ್ಪನ್ನು ಹಾಕಿ ಪುಡಿ ಮಾಡಿ.
- ಪುಡಿಮಾಡಿದ ಮಸಾಲೆಯನ್ನು ಹುರಿದ ಅಕ್ಕಿ ಹಿಟ್ಟು ಮತ್ತು ರವೇ (ಮೈದಾ ಹಿಟ್ಟು) ಇರುವ ಬಾಣಲೆಗೆ ಹಾಕಿ. ಕಲಸಿ.
- ನಂತ್ರ 2 ಟೇಬಲ್ ಚಮಚ ಬಿಸಿ ಎಣ್ಣೆಯನ್ನು ಹಾಕಿ, ಚೆನ್ನಾಗಿ ಒತ್ತಿ ಕಲಸಿ.
- ಕಲಸಿದ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಕೋಡುಬಳೆ ಮಾಡುವಷ್ಟು ಮೆತ್ತಗಿದ್ದರೆ ಸಾಕು.
- ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಬಳೆಗಳನ್ನು ಮಾಡಿ.
- ಎಣ್ಣೆ ಬಿಸಿ ಮಾಡಿ ಕೋಡುಬಳೆಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.
While learning to cook from your valuable recipes, I am also sharpening my Matrabashe. Thank you for the rendition in Kannada!
ಪ್ರತ್ಯುತ್ತರಅಳಿಸಿ