ಸೋಮವಾರ, ಆಗಸ್ಟ್ 7, 2017

Pudina coconut chutney recipe in Kannada | ಪುದಿನ ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ

Pudina coconut chutney recipe in Kannada

Pudina coconut chutney recipe in Kannada | ಪುದಿನ ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ 
  2. 2 - 4 ಹಸಿರು ಮೆಣಸಿನಕಾಯಿ 
  3. ಒಂದು ಸಣ್ಣ ಹಿಡಿ ಪುದಿನ ಸೊಪ್ಪು
  4. ಸ್ವಲ್ಪ ಹುಣಿಸೆ ಹಣ್ಣು 
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. 4 ಕರಿಬೇವಿನ ಎಲೆ
  3. 1/4 ಟಿಸ್ಪೂನ್ ಸಾಸಿವೆ 
  4. ಒಂದು ಒಣ ಮೆಣಸು
  5. ಒಂದು ಚಿಟಿಕೆ ಇಂಗು

ಪುದಿನ ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ:

  1. ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಹಸಿರುಮೆಣಸಿನ ಕಾಯಿ, ಪುದಿನ ಸೊಪ್ಪು ಮತ್ತು ಉಪ್ಪು ಹಾಕಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  3. ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು, ಒಣ ಮೆಣಸು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...