Sabakki payasa recipe in Kannada | ಸಾಬಕ್ಕಿ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/4 ಕಪ್ ಸಾಬಕ್ಕಿ
- 2.5 ಕಪ್ ಹಾಲು
- 1.5 ಕಪ್ ನೀರು
- 1/4 ಕಪ್ ಸಕ್ಕರೆ
- 2 ಟೀಸ್ಪೂನ್ ತುಪ್ಪ
- 5-6 ಗೋಡಂಬಿ
- 8-10 ಒಣದ್ರಾಕ್ಷಿ
- ಚಿಟಿಕೆ ಕೇಸರಿ (ಬೇಕಾದಲ್ಲಿ)
- ಒಂದು ಚಿಟಿಕೆ ಏಲಕ್ಕಿ ಪುಡಿ
ಸಾಬಕ್ಕಿ ಪಾಯಸ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಅರ್ಧ ಲೋಟ ನೀರಿನಲ್ಲಿ ನೆನೆಸಿಡಿ.
- ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಕುದಿಯಲು ಇಡಿ.
- ಸಾಬಕ್ಕಿ ನೆನೆದ ನಂತರ ಮತ್ತೊಂದು ಪಾತ್ರೆಯಲ್ಲಿ 1 ಕಪ್ ನೀರನ್ನು ಕುದಿಯಲು ಇಡಿ.
- ಅದಕ್ಕೆ ನೆನೆಸಿದ ಸಾಬಕ್ಕಿ ಹಾಕಿ. ಆಗಾಗ್ಯೆ ಮಗುಚುತ್ತಾ ಸಣ್ಣ ಉರಿಯಲ್ಲಿ ಬೇಯಿಸಿ.
- ಮುಕ್ಕಾಲುವಾಸಿ ಬೆಂದಾಗ ಕುದಿಸಿದ ಹಾಲು ಹಾಕಿ.
- ಸಾಬಕ್ಕಿ ಪಾರದರ್ಶಕವಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ. ಬೇಕಾದಲ್ಲಿ ನೀರು ಅಥವಾ ಹಾಲನ್ನು ಸೇರಿಸಿ.
- ನಂತರ ಸಕ್ಕರೆ ಸೇರಿಸಿ. ಗಮನಿಸಿ ಸಕ್ಕರೆ ಹಾಕಿದ ಮೇಲೆ ಸಾಬಕ್ಕಿ ಬೇಯುವುದಿಲ್ಲ.
- ಸಕ್ಕರೆ ಕರಗಿದ ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ. ಸ್ಟವ್ ಸ್ಟೋವ್ ಆಫ್ ಮಾಡಿ.
- ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ