ಬುಧವಾರ, ಆಗಸ್ಟ್ 23, 2017

Modaka karigadubu recipe in Kannada | ಮೋದಕ ಕರಿಗಡುಬು ಮಾಡುವ ವಿಧಾನ

Modaka karigadubu recipe in Kannada

Modaka karigadubu recipe in Kannada | ಮೋದಕ ಕರಿಗಡುಬು ಮಾಡುವ ವಿಧಾನ 

 ಕಣಕಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಮೈದಾ ಹಿಟ್ಟು 
  2. 2 ಟೀಸ್ಪೂನ್ ತುಪ್ಪ 
  3. ಚಿಟಿಕೆ ಅರಿಶಿನ
  4. ನೀರು ಹಿಟ್ಟು ಕಲಸಲು
  5. 1/4 ಟೀಸ್ಪೂನ್ ಉಪ್ಪು

 ಹೂರಣಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 1/4 ಕಪ್ ಸಕ್ಕರೆ
  3. 1 ಏಲಕ್ಕಿ

ಮೋದಕ ಕರಿಗಡುಬು ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಅರಿಶಿನ, ತುಪ್ಪ ಮತ್ತು ಉಪ್ಪನ್ನು ತೆಗೆದುಕೊಳ್ಳಿ. 
  2. ಚೆನ್ನಾಗಿ ತಿಕ್ಕಿ ಕಲಸಿ. 
  3. ನಂತ್ರ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧಮಾಡಿ. ಹಿಟ್ಟು ಚಪಾತಿ ಹಿಟ್ಟಿಗಿಂತ ತುಂಬ ಗಟ್ಟಿಯಿರಬೇಕು. ಮುಚ್ಚಿ ೨೦ ನಿಮಿಷ ಪಕ್ಕಕ್ಕಿಡಿ. 
  4. ಮಿಕ್ಸಿ ಜಾರಿಗೆ ತೆಂಗಿನ ತುರಿ ಹಾಕಿ ಪುಡಿ ಮಾಡಿಕೊಳ್ಳಿ. 
  5. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ, ಮಧ್ಯಮ ಉರಿಯಲ್ಲಿ ನೀರಾರುವವರೆಗೆ ಮಗುಚಿ.  
  6. ಈಗ ಕಲಸಿದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿ, ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹಿಟ್ಟನ್ನು ತೆಗೆದುಕೊಳ್ಳಿ. 
  7. ವೃತ್ತಾಕಾರವಾಗಿ ಲಟ್ಟಿಸಿ. ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ. 
  8. ಮಧ್ಯದಲ್ಲಿ ಹೂರಣ ಇಟ್ಟು, ಮೋದಕದಂತೆ ಅಥವಾ ಕರ್ಜಿಕಾಯಿಯಂತೆ ಮಾಡಿ. ಕರಿಗಡುಬು ಕರ್ಜಿಕಾಯಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ. 
  9. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  10. ಮೋದಕ ಮತ್ತು ಕರಿಗಡುಬುಗಳನ್ನು ಸಣ್ಣ-ಮಧ್ಯಮ ಉರಿಯಲ್ಲಿ ಸಟ್ಟುಗದಿಂದ ಎಣ್ಣೆ ಹಾರಿಸುತ್ತ ಕಾಯಿಸಿ. ಬಿಸಿ ಆರಿದ ಮೇಲೆ ಗಲಿ ಆಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...