Karjikai recipe in Kannada | ಕರ್ಜಿಕಾಯಿ ಮಾಡುವ ವಿಧಾನ
ಕಣಕಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಮೈದಾ ಹಿಟ್ಟು
- 1 ಟೇಬಲ್ ಚಮಚ ಚಿರೋಟಿ ರವೆ (ಗರಿ ಗರಿ ಕರ್ಜಿಕಾಯಿ ಬೇಕಾದಲ್ಲಿ)
- 2 ಟೀಸ್ಪೂನ್ ತುಪ್ಪ
- ಚಿಟಿಕೆ ಅರಿಶಿನ
- ಹಾಲು ಅಥವಾ ನೀರು, ಹಿಟ್ಟು ಕಲಸಲು
- 1/4 ಟೀಸ್ಪೂನ್ ಉಪ್ಪು
ಹೂರಣಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ತೆಂಗಿನ ತುರಿ
- 1/4 ಕಪ್ ಹುರಿಗಡಲೆ ಅಥವಾ ಹುರಿದ ಶೇಂಗಾ ಅಥವಾ (ಗೇರುಬೀಜ+ಬಾದಾಮಿ)
- 1/4 ಕಪ್ ಸಕ್ಕರೆ
- 1 ಏಲಕ್ಕಿ
- 2 ಟೀಸ್ಪೂನ್ ಗಸಗಸೆ
ಕರ್ಜಿಕಾಯಿ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಚಿರೋಟಿ ರವೆ (ಬೇಕಾದಲ್ಲಿ), ಅರಿಶಿನ ಮತ್ತು ಉಪ್ಪನ್ನು ತೆಗೆದುಕೊಳ್ಳಿ.
- ಅದಕ್ಕೆ ೨ ಚಮಚ ತುಪ್ಪವನ್ನು ಬಿಸಿ ಮಾಡಿ ಹಾಕಿ.
- ಚೆನ್ನಾಗಿ ತಿಕ್ಕಿ ಕಲಸಿ.
- ನಂತ್ರ ಹಾಲು ಅಥವಾ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧಮಾಡಿ. ಹಿಟ್ಟು ಚಪಾತಿ ಹಿಟ್ಟಿಗಿಂತ ತುಂಬ ಗಟ್ಟಿಯಿರಬೇಕು. ಮುಚ್ಚಿ ೨೦ ನಿಮಿಷ ಪಕ್ಕಕ್ಕಿಡಿ.
- ಮಿಕ್ಸಿ ಜಾರಿಗೆ ಹುರಿಗಡಲೆ (ಅಥವಾ ಹುರಿದ ನೆಲಗಡಲೆ), ಸಕ್ಕರೆ ಮತ್ತು ಏಲಕ್ಕಿ ಹಾಕಿ ಸಣ್ಣ ಪುಡಿ ಮಾಡಿ.
- ಅದಕ್ಕೆ ಕೊಬ್ಬರಿ ತುರಿ ಮತ್ತು ಗಸಗಸೆ ಸೇರಿಸಿ ಕಲಸಿ ಪಕ್ಕಕ್ಕಿಡಿ. ಹೂರಣ ತಯಾರಾಯಿತು.
- ಈಗ ಕಲಸಿದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿ, ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹಿಟ್ಟನ್ನು ತೆಗೆದುಕೊಳ್ಳಿ.
- ವೃತ್ತಾಕಾರವಾಗಿ ಲಟ್ಟಿಸಿ. ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ.
- ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ. ಕರ್ಜಿಕಾಯಿ ಅಚ್ಚಿದ್ದರೆ ಸುಲಭ. ನಾನು ಫೋರ್ಕ್ ಬಳಸಿ ಅಂಚನ್ನು ಅಂಟಿಸಿದೆ. ಚೆನ್ನಾಗಿ ಅಂಟಿಸಬೇಕು. ಇಲ್ಲವಾದಲ್ಲಿ ಎಣ್ಣೆಯಲ್ಲಿ ಕಾಯಿಸುವಾಗ ಅಂಚು ಬಿಡಬಹುದು.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಕರ್ಜಿಕಾಯಿಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಕಣ್ಣು ಸಟ್ಟುಗದಿಂದ ಎಣ್ಣೆ ಹಾರಿಸುತ್ತ ಕಾಯಿಸಿದಲ್ಲಿ ಕರ್ಜಿಕಾಯಿ ಚೆನ್ನಾಗಿ ಕಾಯುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ