Hayagreeva recipe in Kannada | ಹಯಗ್ರೀವ ಅಥವಾ ಹೂರಣ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡ್ಲೆಬೇಳೆ
- 1/2 ಕಪ್ ಪುಡಿ ಮಾಡಿದ ಬೆಲ್ಲ (ರುಚಿಗೆ ಬದಲಾಯಿಸಿ)
- 2 ಟೇಬಲ್ ಚಮಚ ತೆಂಗಿನ ತುರಿ (ಬೇಕಾದಲ್ಲಿ)
- 1 ಟೇಬಲ್ ಚಮಚ ಒಣ ದ್ರಾಕ್ಷಿ
- 1 ಟೇಬಲ್ ಚಮಚ ಗೋಡಂಬಿ
- 1 ಏಲಕ್ಕಿ
ಹಯಗ್ರೀವ ಅಥವಾ ಹೂರಣ ಮಾಡುವ ವಿಧಾನ:
- ಹೂರಣ ತಯಾರಿಸಲು ಬೇಳೆಯನ್ನು ತೊಳೆದು ಎರಡು ಪಟ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ, 3 - 4 ವಿಷಲ್ ಮಾಡಿದರೆ ಸಾಕು.
- ಬೇಕಾದಲ್ಲಿ ಬೇಯಿಸಿದ ಬೇಳೆಯ ನೀರು ಬಸಿದು ತೆಗೆಯಿರಿ. ಈ ನೀರನ್ನು ಸಾರು ಮಾಡಲು ಉಪಯೋಗಿಸಬಹುದು. ನಾನು ನೀರು ತೆಗೆಯಲಿಲ್ಲ.
- ಬೇಯಿಸಿದ ಬೇಳೆಗೆ, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಮಗುಚುತ್ತಾ ಇರಿ.
- ಮೊದಲಿಗೆ ಸ್ವಲ್ಪ ನೀರಾಗಿ, ಆಮೇಲೆ ಗಟ್ಟಿಯಾಗುತ್ತದೆ. ಹೆಚ್ಚಿನ ನೀರಿನಂಶ ಹೋಗುವವರೆಗೆ ಮಗುಚಿ. ತುಂಬ ಗಟ್ಟಿ ಮಾಡುವುದು ಬೇಡ ಏಕೆಂದರೆ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ.
- ಕೊನೆಯಲ್ಲಿ ತುಪ್ಪ ಬಿಸಿ ಮಾಡಿ, ದ್ರಾಕ್ಷಿ, ಗೋಡಂಬಿ ಹುರಿದು ಸೇರಿಸಿ. ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ