ಗುರುವಾರ, ಆಗಸ್ಟ್ 10, 2017

Shankar poli or thukudi recipe in Kannada | ಶಂಕರ್ ಪೋಳಿ ಅಥವಾ ತುಕುಡಿ ಮಾಡುವ ವಿಧಾನ

Shankar poli or thukudi recipe in Kannada

Shankar poli or thukudi recipe in Kannada | ಶಂಕರ್ ಪೋಳಿ ಅಥವಾ ತುಕುಡಿ ಮಾಡುವ ವಿಧಾನ 

ಸಿಹಿ ಶಂಕರ್ ಪೋಳಿಗೆ ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು 
  2. 1 ಟೀಸ್ಪೂನ್ ತುಪ್ಪ
  3. 1/2 ಟೀಸ್ಪೂನ್ ಸಕ್ಕರೆ (ರುಚಿಗೆ ತಕ್ಕಂತೆ ಬದಲಾಯಿಸಿ)
  4. ಉಪ್ಪು ರುಚಿಗೆ ತಕ್ಕಷ್ಟು
  5. ಕರಿಯಲು ಎಣ್ಣೆ

ಖಾರ ಶಂಕರ್ ಪೋಳಿಗೆ ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು 
  2. 1 ಟೀಸ್ಪೂನ್ ತುಪ್ಪ
  3. 1/2 ಚಮಚ ಅಚ್ಚ ಖಾರದ ಪುಡಿ
  4. ಉಪ್ಪು ರುಚಿಗೆ ತಕ್ಕಷ್ಟು
  5. ಕರಿಯಲು ಎಣ್ಣೆ

ಶಂಕರ್ ಪೋಳಿ ಮಾಡುವ ವಿಧಾನ:

  1. ಮೈದಾ ಹಿಟ್ಟನ್ನು ಜರಡಿ ಹಿಡಿದು, ಒಂದು ಪಾತ್ರೆಯಲ್ಲಿ ತೆಗೆದು ಕೊಳ್ಳಿ. 
  2. ಬಿಸಿ ತುಪ್ಪ ಹಾಕಿ ಚೆನ್ನಾಗಿ ಕಲಸಿ.
  3. ನಂತರ ಸಿಹಿ ಬೇಕಾದಲ್ಲಿ ಉಪ್ಪು ಮತ್ತು ಸಕ್ಕರೆ, ಖಾರ ಬೇಕಾದಲ್ಲಿ ಉಪ್ಪು ಮತ್ತು ಅಚ್ಚ ಖಾರದ ಪುಡಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ಗಟ್ಟಿಯಾಗಿ ಕಲಸಿ. ಚಪಾತಿ ಹಿಟ್ಟಿಗಿಂತ ತುಂಬ ಗಟ್ಟಿಯಿರಬೇಕು. ಗರಿಗರಿಯಾದ ಶಂಕರಪೋಳಿ ಮಾಡಲು ಗಟ್ಟಿಯಾದ ಹಿಟ್ಟು ಕಲಸುವುದು ತುಂಬ ಮುಖ್ಯ. 
  5. ದೊಡ್ಡ ನಿಂಬೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ.
  6. ವಜ್ರಕಾರವಾಗಿ ಕತ್ತರಿಸಿ. 
  7. ಬಿಸಿಯಾದ ಎಣ್ಣೆಯಲ್ಲಿ ಹಾಕಿ ಸಣ್ಣ ಮಧ್ಯಮ ಉರಿಯಲ್ಲಿ ಕಾಯಿಸಿ. 
  8. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಬಿಸಿ ಆರಿದ ಮೇಲೆ ಸವಿದು ಆನಂದಿಸಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...