ಶುಕ್ರವಾರ, ಮಾರ್ಚ್ 3, 2017

Avalakki bisi bele Bath Recipe in Kannada | ಅವಲಕ್ಕಿ ಬಿಸಿ ಬೇಳೆ ಬಾತ್ ಮಾಡುವ ವಿಧಾನ

Avalakki bisi bele Bath Recipe in Kannada

Avalakki bisi bele Bath Recipe in Kannada | ಅವಲಕ್ಕಿ ಬಿಸಿ ಬೇಳೆ ಬಾತ್ ಮಾಡುವ ವಿಧಾನ

ಅವಲಕ್ಕಿ ಬಿಸಿ ಬೇಳೆ ಬಾತ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಹೆಸರುಬೇಳೆ
  2. 1 ಕಪ್ ಗಟ್ಟಿ ಅವಲಕ್ಕಿ
  3. 8 ಬೀನ್ಸ್
  4. 1 ಸಣ್ಣ ಕ್ಯಾರೆಟ್
  5. 1 ಸಣ್ಣ ಆಲೂಗಡ್ಡೆ
  6. 2 ಟೇಬಲ್ ಸ್ಪೂನ್ ಹಸಿ ಅಥವಾ ನೆನೆಸಿದ ಬಟಾಣಿ
  7. 1 ಟೊಮ್ಯಾಟೋ
  8. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣು
  9. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  10. ದೊಡ್ಡ ಚಿಟಿಕೆ ಅರಿಶಿನ ಪುಡಿ
  11. 2 ಟೇಬಲ್ ಸ್ಪೂನ್ ಬಿಸಿಬೇಳೆ ಬಾತ್ ಪುಡಿ
  12. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 2 ಟೇಬಲ್ ಸ್ಪೂನ್ ನೆಲಗಡಲೆ ಅಥವಾ ಶೇಂಗಾ
  3. 1 ಟೀಸ್ಪೂನ್ ಕಡ್ಲೆ ಬೇಳೆ
  4. 2 ಟೀಸ್ಪೂನ್ ಉದ್ದಿನ ಬೇಳೆ
  5. 8-10 ಗೋಡಂಬಿ
  6. 7 - 8 ಕರಿಬೇವಿನ ಎಲೆ
  7. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  8. 1/2 ಕ್ಯಾಪ್ಸಿಕಂ ಹೆಚ್ಚಿದ್ದು (ಬೇಕಾದಲ್ಲಿ)
  9. 1 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  10. 1/4 ಟೀಸ್ಪೂನ್ 
  11. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಅವಲಕ್ಕಿ ಬಿಸಿ ಬೇಳೆ ಬಾತ್ ಮಾಡುವ ವಿಧಾನ:

  1. ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ಹೆಸರುಬೇಳೆಯನ್ನು ತೊಳೆಯಿರಿ. 
  3. ಕತ್ತರಿಸಿದ ತರಕಾರಿ, ಬಟಾಣಿ ಮತ್ತು ಹೆಸರುಬೇಳೆಯನ್ನು ಕುಕ್ಕರ್‌ನಲ್ಲಿ ಹಾಕಿ. 1 ಕಪ್ ನೀರು ಸೇರಿಸಿ. 2 ವಿಷಲ್ ಮಾಡಿ ಬೇಯಿಸಿ.
  4. ಒಂದು ಬಾಣಲೆ ತೆಗೆದುಕೊಂಡು ಎಣ್ಣೆ, ಶೇಂಗಾ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ. 
  5. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. ಕಾಪ್ಸಿಕಮ್ ಹಾಕುವುದಾದಲ್ಲಿ ಈಗ ಹಾಕಿ. 
  6. ನಂತರ ಕತ್ತರಿಸಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಸ್ಟೋವ್ ಆಫ್ ಮಾಡಿ. 
  7. ಕೂಡಲೇ ಬಿಸಿಬೇಳೆ ಬಾತ್ ಪುಡಿ, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  8. ತೊಳೆದ ಗಟ್ಟಿ ಅವಲಕ್ಕಿ ಮತ್ತು ಒಂದು ಕಪ್ ನೀರು ಹಾಕಿ ಕುದಿಸಿ. 
  9. ನಂತರ ಬೇಯಿಸಿದ ತರಕಾರಿ ಮತ್ತು ಬೇಳೆಯನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಮಾರ್ಚ್ 2, 2017

Menthe kadubu recipe in Kannada | ಮೆಂತೆ ಕಡುಬು ಮಾಡುವ ವಿಧಾನ

Menthe kadubu recipe in Kannada

Menthe kadubu recipe in Kannada | ಮೆಂತೆ ಕಡುಬು ಮಾಡುವ ವಿಧಾನ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿ ಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
  3. 1/4 ಟೀಸ್ಪೂನ್ ಅಜ್ವಾಯ್ನ್ ಅಥವಾ ಓಂಕಾಳು
  4. ದೊಡ್ಡ ಚಿಟಿಕೆ ಇಂಗು 
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಟೀಸ್ಪೂನ್ ಸಾಸಿವೆ 
  2. 1/2 ಟೀಸ್ಪೂನ್ ಜೀರಿಗೆ
  3. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  4. 1/2 ಕಪ್ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು
  5. 1/4 ಟೀಸ್ಪೂನ್ ಅಚ್ಚ ಖಾರದ ಪುಡಿ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಅರಿಶಿನ ಪುಡಿ
  7. 5 - 6 ಟೀಸ್ಪೂನ್ ಎಣ್ಣೆ 
  8. ಉಪ್ಪು ರುಚಿಗೆ ತಕ್ಕಷ್ಟು

ಮೆಂತೆ ಕಡುಬು ಮಾಡುವ ವಿಧಾನ:

  1.  ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಸಣ್ಣದಾಗಿ ಹೆಚ್ಚಿಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಹಿಟ್ಟಿಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ಗೋಧಿ ಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ ಇಂಗು ಮತ್ತು ಓಂಕಾಳು). ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೆತ್ತಗಿನ ಹಿಟ್ಟು ಕಲಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿರಲಿ. 
  3. ನಂತರ ಸಣ್ಣ ನೆಲ್ಲಿಕಾಯಿ ಗಾತ್ರದ ಬಿಲ್ಲೆಗಳನ್ನು (ಚಪ್ಪಟೆಯಾದ ಉಂಡೆ) ಮಾಡಿ. 
  4. ಕುದಿಯುವ ನೀರಿನಲ್ಲಿ ಹಾಕಿ 20 ನಿಮಿಷಗಳ ಕಾಲ ಬೇಯಿಸಿ.
  5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
  6.  ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. 
  7. ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು ಹಾಕಿ ಬಾಡಿಸಿ. ಖಾರದ ಪುಡಿ (ಬೇಕಾದಲ್ಲಿ), ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಗುಚಿ. 
  8. ಬೇಯಿಸಿದ ಬಿಲ್ಲೆಗಳನ್ನು ಅರ್ಧ ಕಪ್ ನೀರಿನೊಂದಿಗೆ ಹಾಕಿ, ಕುದಿಸಿ. 
  9. ನೀರಾರಿದ ಮೇಲೆ ಸ್ಟವ್ ಆಫ್ ಮಾಡಿ, ಬಡಿಸಿ.

ಬುಧವಾರ, ಮಾರ್ಚ್ 1, 2017

Curd sandwich recipe in Kannada | ಮೊಸರಿನ ಸ್ಯಾಂಡ್ ವಿಚ್ ಮಾಡುವ ವಿಧಾನ

Curd sandwich recipe in Kannada

Curd sandwich recipe in Kannada | ಮೊಸರಿನ ಸ್ಯಾಂಡ್ ವಿಚ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು 
  2. 8 - 10 ಬ್ರೆಡ್ 
  3. 1 ಸಣ್ಣ ಕ್ಯಾರೆಟ್ 
  4. 1 ಈರುಳ್ಳಿ 
  5. ಎಲೆಕೋಸು ಸಣ್ಣ ತುಂಡು 
  6. 4 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  7. 1/4 - 1/2 ಟೀಸ್ಪೂನ್ ಅಚ್ಚ ಖಾರದ ಪುಡಿ ಅಥವಾ ಕರಿ ಮೆಣಸು ಪುಡಿ
  8. 1/4 ಟೀಸ್ಪೂನ್ ಚಾಟ್ ಮಸಾಲಾ (ಬೇಕಾದಲ್ಲಿ; ಅಥವಾ ಯಾವುದೇ ಇತರ ಮಸಾಲೆ ಪುಡಿ ಬಳಸಬಹುದು)
  9. ಉಪ್ಪು ರುಚಿಗೆ ತಕ್ಕಷ್ಟು.

ಮೊಸರಿನ ಸ್ಯಾಂಡ್ ವಿಚ್ ಮಾಡುವ ವಿಧಾನ:

  1. ಒಂದು ಪಾತ್ರೆಯ ಮೇಲೆ ಜರಡಿ ಇಟ್ಟು, ಅದರ ಮೇಲೆ ಬಟ್ಟೆ ಹಾಕಿ, ಮೊಸರನ್ನು ಬಟ್ಟೆಯ ಮೂಲಕ 30 ನಿಮಿಷಗಳ ಕಾಲ ಶೋಧಿಸಲು ಇಡಿ. ಇದರಿಂದ ನಮಗೆ ಗಟ್ಟಿ ಮೊಸರು ದೊರಕುತ್ತದೆ. 
  2. ಎಲ್ಲ ತರಕಾರಿಗಳನ್ನು ಸಣ್ಣಗೆ ಕತ್ತರಿಸಿ. ಕ್ಯಾರೆಟ್ ನ್ನು ತುರಿಯಿರಿ. ನಿಮ್ಮಿಷ್ಟದ ಯಾವುದೇ ತರಕಾರಿಯನ್ನು ಉಪಯೋಗಿಸಬಹುದು. 
  3. ಕತ್ತರಿಸಿದ ತರಕಾರಿಗೆ ಉಪ್ಪು, ಖಾರ ಮತ್ತು ಮಸಾಲೆ ಪುಡಿ ಹಾಕಿ ಕಲಸಿ. ಬೇಕಾದಲ್ಲಿ ಸಕ್ಕರೆಯನ್ನು ಹಾಕಬಹುದು.  
  4. ಕೊನೆಯಲ್ಲಿ ಶೋಧಿಸಿದ ಗಟ್ಟಿ ಮೊಸರನ್ನು ಹಾಕಿ ಕಲಸಿ, ಪಕ್ಕಕ್ಕಿಡಿ. 
  5. ಬ್ರೆಡ್ ನ್ನು, ಅಂಚು ಕತ್ತರಿಸಿ, ಬೆಣ್ಣೆ ಹಚ್ಚಿ, ಕಾವಲಿ ಅಥವಾ ತವಾದಲ್ಲಿ ಕಾಯಿಸಿ. 
  6. ನಂತರ ಕಲಸಿಟ್ಟ ತರಕಾರಿ ಮತ್ತು ಮೊಸರಿನ ಮಿಶ್ರಣವನ್ನು ಮಧ್ಯದಲ್ಲಿಟ್ಟು ಸ್ಯಾಂಡ್ ವಿಚ್ ತಯಾರಿಸಿ. ಸವಿದು ಆನಂದಿಸಿ. 


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...