Badanekayi shenga pudi palya recipe in Kannada | ಬದನೇಕಾಯಿ ಪಲ್ಯ ಮಾಡುವ ವಿಧಾನ
ಬದನೇಕಾಯಿ ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 7 - 8 ಸಣ್ಣ ಗಾತ್ರದ ಬದನೆ ಕಾಯಿ
- 1/4 ಕಪ್ ಶೇಂಗಾ ಅಥವಾ ನೆಲಗಡಲೆ
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉದ್ದಿನ ಬೇಳೆ
- 7 - 8 ಕರಿಬೇವಿನ ಎಲೆ
- 2 - 3 ಹಸಿರು ಮೆಣಸಿನಕಾಯಿ
- 1 ದೊಡ್ಡ ಈರುಳ್ಳಿ
- 1/4 ಟೀಸ್ಪೂನ್ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- ನಿಮ್ಮ ರುಚಿ ಪ್ರಕಾರ ಉಪ್ಪು
- 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಬದನೇಕಾಯಿ ಪಲ್ಯ ಮಾಡುವ ವಿಧಾನ:
- ಮೊದಲಿಗೆ ಬದನೆಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿ ನೀರಿನಲ್ಲಿ ಹಾಕಿಟ್ಟು ಕೊಳ್ಳಿ.
- ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಶೇಂಗಾ ಅಥವಾ ನೆಲಗಡಲೆಯನ್ನು ಕಂದು ಬಣ್ಣ ಬಂದು ಗರಿಗರಿ ಆಗುವವರೆಗೆ ಹುರಿಯಿರಿ.
- ಬಿಸಿ ಕಡಿಮೆ ಆದಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ
- ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಸೀಳಿಟ್ಟ ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ.
- ಕತ್ತರಿಸಿಟ್ಟ ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿಯಿರಿ.
- ಅರಿಶಿನ ಮತ್ತು ಇಂಗು ಸೇರಿಸಿ.
- ನಂತರ ನೀರಿನಲ್ಲಿ ಹಾಕಿದ ಬದನೆಕಾಯಿಯನ್ನು, ನೀರು ಹಿಂಡಿ ತೆಗೆದು ಹಾಕಿ.
- ರುಚಿಗೆ ತಕ್ಕಂತೆ ಉಪ್ಪು ಹಾಕಿ.
- ರುಚಿಗೆ ತಕ್ಕಂತೆ ಹುಣಿಸೆರಸ ಹಾಕಿ ಮಗುಚಿ.
- ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಿ.
- ಕೊನೆಯಲ್ಲಿ ಪುಡಿ ಮಾಡಿದ ಶೇಂಗಾ ಹಾಕಿ ಕಲಸಿ. ಸ್ಟವ್ ಆಫ್ ಮಾಡಿ.
- ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ