Kayi rotti recipe in Kannada | ಕಾಯಿ ರೊಟ್ಟಿ ಮಾಡುವ ವಿಧಾನ
kayi rotti video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1/2 ಕಪ್ ತೆಂಗಿನತುರಿ
- 1.5 ಕಪ್ ನೀರು (ಕಾಯಿ ರುಬ್ಬುವ ನೀರು ಸೇರಿಸಿ)
- ಉಪ್ಪು ರುಚಿಗೆ ತಕ್ಕಷ್ಟು
ಕಾಯಿ ರೊಟ್ಟಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ 1.25 ಕಪ್ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ಆ ಸಮಯದಲ್ಲಿ ಮಿಕ್ಸಿ ಜಾರಿನಲ್ಲಿ ತೆಂಗಿನತುರಿ ಮತ್ತು ಉಳಿದ ನೀರು ತೆಗೆದುಕೊಂಡು ನುಣ್ಣಗೆ ಅರೆಯಿರಿ.
- ಅದನ್ನು ಕುದಿಯಲು ಇಟ್ಟ ಬಾಣಲೆಗೆ ಸೇರಿಸಿ.
- ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ ಒಂದೆರಡು ಸುತ್ತು ಕಲಸಿ. ಸ್ಟವ್ ಆಫ್ ಮಾಡಿ.
- ಸ್ಟವ್ ಆರಿಸಿದ ಮೇಲೆ ಸಟ್ಟುಗದಿಂದ ಚೆನ್ನಾಗಿ ಕಲಸಿ ಮುಚ್ಚಿಡಿ.
- ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ.
- ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ.
- ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ.
- ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ