Healthy unde recipe in Kannada | ಆರೋಗ್ಯಕರ ಶಕ್ತಿ ಉಂಡೆ ಮಾಡುವ ವಿಧಾನ
ಆರೋಗ್ಯಕರ ಶಕ್ತಿ ಉಂಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಎಳ್ಳು
- 1 ಕಪ್ ಅಗಸೆಬೀಜ
- 1/2 ಕಪ್ ಬಾದಾಮಿ
- 1 ಕಪ್ ಬೆಲ್ಲ
- 1/4 ಕಪ್ ನೀರು
- 1 ಟೇಬಲ್ ಚಮಚ ತುಪ್ಪ
ಆರೋಗ್ಯಕರ ಶಕ್ತಿ ಉಂಡೆ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಳ್ಳನ್ನು ಚಟಪಟ ಸಿಡಿಯಲು ಶುರುವಾಗುವವರೆಗೆ ಹುರಿಯಿರಿ.
- ನಂತರ ಅಗಸೆಬೀಜವನ್ನು ಸ್ವಲ್ಪ ಬಿಸಿ ಆಗುವವರೆಗೆ ಹುರಿಯಿರಿ.
- ಕೊನೆಯಲ್ಲಿ ಬಾದಾಮಿಯನ್ನು ಅಲ್ಲಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಹುರಿದ ಮೂರು ಪದಾರ್ಥಗಳನ್ನು ತರಿತರಿಯಾಗಿ ಪುಡಿ ಮಾಡಿ.
- ಆಮೇಲೆ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರು ತೆಗೆದುಕೊಂಡು ಕುದಿಸಿ.
- ಒಂದೆಳೆ ಪಾಕ ಮಾಡಿ.
- ಪುಡಿ ಮಾಡಿದ ಪದಾರ್ಥಗಳನ್ನು ಹಾಕಿ ಮಗುಚಿ.
- ತುಪ್ಪ ಸೇರಿಸಿ, ಮತ್ತೊಮ್ಮೆ ಮಗುಚಿ, ಸ್ಟವ್ ಆಫ್ ಮಾಡಿ.
- ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ.
- ದಿನಕ್ಕೊಂದು ಉಂಡೆಯಂತೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ