Heerekai rasa palya recipe in kannada | ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ
ಹೀರೆಕಾಯಿ ರಸ ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಹೀರೆಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 5 - 6 ಕರಿಬೇವು
- 1 ಈರುಳ್ಳಿ
- 1 ಟೊಮೇಟೊ
- 1/4 ಟೀಸ್ಪೂನ್ ಅರಿಶಿನ
- ದೊಡ್ಡ ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಂತೆ
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಮಸಾಲೆಪುಡಿಗೆ ಬೇಕಾಗುವ ಪದಾರ್ಥಗಳು:
- 2 ಟೇಬಲ್ ಚಮಚ ಶೇಂಗಾ ಅಥವಾ ಕಡಲೆಕಾಯಿ
- 3 - 4 ಒಣಮೆಣಸಿನಕಾಯಿ
- 1 ಟೇಬಲ್ ಚಮಚ ಕೊತ್ತಂಬರಿ ಬೀಜ
- 1 ಟೇಬಲ್ ಚಮಚ ಎಳ್ಳು
- 1/4 ಕಪ್ ಒಣಕೊಬ್ಬರಿ
ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ:
- ಹೀರೆಕಾಯಿಯನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ತೆಳುವಾದ ಸಿಪ್ಪೆ ತೆಗೆದರೆ ಸಾಕು.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಕರಿಬೇವು ಸೇರಿಸಿ.
- ಕತ್ತರಿಸಿದ ಈರುಳ್ಳಿ ಮತ್ತು ದೊಣ್ಣೆಮೆಣಸಿನಕಾಯಿ ಸೇರಿಸಿ, ಹುರಿಯಲು ಪ್ರಾರಂಭಿಸಿ.
- ಅರಿಶಿನ ಮತ್ತು ಇಂಗು ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ಕತ್ತರಿಸಿದ ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.
- ಕತ್ತರಿಸಿದ ಹೀರೆಕಾಯಿ ಹಾಕಿ ಹುರಿಯಿರಿ.
- ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಹೀರೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
- ಹೀರೆಕಾಯಿ ಬೇಯುವ ಸಮಯದಲ್ಲಿ, ಮಸಾಲೆ ತಯಾರಿಸೋಣ. ಅದಕ್ಕೆ ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿ ಮತ್ತು ಶೇಂಗಾ ಹುರಿಯಿರಿ.
- ಶೇಂಗಾ ಹುರಿದ ಮೇಲೆ, ಅದೇ ಬಾಣಲೆಗೆ ಎಳ್ಳು ಮತ್ತು ಕೊತ್ತಂಬರಿ ಬೀಜ ಸೇರಿಸಿ ಹುರಿಯಿರಿ.
- ಆನಂತರ ಒಣಕೊಬ್ಬರಿ ಸೇರಿಸಿ ಹುರಿಯಿರಿ.
- ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ.
- ಬೇಯುತ್ತಿರುವ ಹೀರೇಕಾಯಿಗೆ ರುಚಿಗೆ ತಕ್ಕಂತೆ ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ.
- ತಯಾರಿಸಿದ ಮಸಾಲೆ ಪುಡಿ ಹಾಕಿ.
- ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಸಿಹಿಯನ್ನು ರುಚಿಗೆ ತಕ್ಕಂತೆ ಹೊಂದಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
- ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ