Rave sandige recipe in Kannada |ರವೆ ಸಂಡಿಗೆ ಮಾಡುವ ವಿಧಾನ
ರವೆ ಸಂಡಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 60 ಎಂಎಲ್)
- 1 ಕಪ್ ರವೆ
- 7 ಕಪ್ ನೀರು
- ದೊಡ್ಡ ಚಿಟಿಕೆ ಇಂಗು (ಬೇಕಾದಲ್ಲಿ)
- 1 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ರವೆ ಸಂಡಿಗೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ನೀರನ್ನು ಅಳತೆ ಮಾಡಿ ಕುದಿಯಲು ಇಡಿ.
- ಅದಕ್ಕೆ ಉಪ್ಪು, ಇಂಗು ಮತ್ತು ಜೀರಿಗೆ ಸೇರಿಸಿ.
- ನೀರು ಕುದಿಯಲು ಶುರು ಆದ ಕೂಡಲೇ ರವೆ ಹಾಕಿ ಮಗುಚಿ.
- ಐದಾರು ನಿಮಿಷ ಅಥವಾ ರವೆ ಬೇಯುವವರೆಗೆ ಮಗುಚಿ.
- ಸ್ಟವ್ ಆಫ್ ಮಾಡಿ.
- ಬಿಸಿ ಕಡಿಮೆ ಆದ ಮೇಲೆ, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ನಲ್ಲಿ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಒಣಗಲು ಇಡಿ.
- ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ.
- ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ.
- ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ