Mysore pak recipe in Kannada | ಮೈಸೂರ್ ಪಾಕ್ ಮಾಡುವ ವಿಧಾನ
ಮೈಸೂರ್ ಪಾಕ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1 ಕಪ್ ಕಡ್ಲೆಹಿಟ್ಟು
- 2 ಕಪ್ ಸಕ್ಕರೆ
- 1 ಕಪ್ ತುಪ್ಪ
- 1.5 ಕಪ್ಎಣ್ಣೆ
- 1 ಕಪ್ ನೀರು
- ತುಪ್ಪ ಹಚ್ಚಿದ ಪ್ಲೇಟ್ ಅಥವಾ ಟ್ರೇ
ಮೈಸೂರ್ ಪಾಕ್ ಮಾಡುವ ವಿಧಾನ:
- ಎಲ್ಲ ಪದಾರ್ಥಗಳನ್ನು ಅಳತೆ ಮಾಡಿಟ್ಟುಕೊಳ್ಳಿ.
- ಒಂದು ಟ್ರೇ ಅಥವಾ ತಟ್ಟೆಯನ್ನು ತುಪ್ಪ ಸವರಿ ಇಟ್ಟುಕೊಳ್ಳಿ.
- ಕಡ್ಲೆಹಿಟ್ಟನ್ನು ಅರ್ಧ ಕಪ್ ಎಣ್ಣೆಯಲ್ಲಿ ಗಂಟಿಲ್ಲದಂತೆ ಕಲಸಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಒಂದು ಕಪ್ ಎಣ್ಣೆ ಮತ್ತು ಒಂದು ಕಪ್ ತುಪ್ಪ ಸೇರಿಸಿ ಚೆನ್ನಾಗಿ ಬಿಸಿ ಮಾಡಿ.
- ನಂತರ ಒಂದು ಬಾಣಲೆಯಲ್ಲಿ ಸಕ್ಕರೆ ಮತ್ತು ನೀರನ್ನು ತೆಗೆದುಕೊಂಡು ಕುದಿಯಲು ಇಡಿ.
- ಆಗಾಗ ಮಗುಚುತ್ತಾ ಒಂದೆಳೆ ಪಾಕ ಮಾಡಿ.
- ಅದಕ್ಕೆ ಕಲಸಿಟ್ಟ ಕಡ್ಲೆಹಿಟ್ಟಿನ ಮಿಶ್ರಣ ಸೇರಿಸಿ, ಕೈ ಬಿಡದೆ ಮಗುಚಿ.
- ಬಿಸಿ ಮಾಡಿದ ತುಪ್ಪ ಮತ್ತು ಎಣ್ಣೆಯನ್ನು ಒಂದೊಂದೇ ಸೌಟಿನಂತೆ ಸೇರಿಸುತ್ತ ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
- ಕೈ ಬಿಡದೆ ಮಗುಚುವುದನ್ನ ಮುಂದುವರೆಸಿ.
- ಕೊನೆಯಲ್ಲಿ ಮಿಶ್ರಣ ತಳ ಬಿಡಲು ಪ್ರಾರಂಭವಾದಾಗ ಮತ್ತು ಮಿಶ್ರಣ ಹಗುರವಾಗಿ ಮೇಲೆ ಬಂದು ಕುದಿಯಲು ಶುರುವಾದಾಗ ಸ್ಟವ್ ಆಫ್ ಮಾಡಿ.
- ತುಪ್ಪ ಸವರಿದ ಟ್ರೇ ಗೆ ಹಾಕಿ.
- ಸುಮಾರು ಒಂದು ನಿಮಿಷ ಬಿಟ್ಟು ಅಥವಾ ಮೇಲಿನ ಭಾಗ ಗಟ್ಟಿಯಾಗಲು ಶುರುವಾದಾಗ ನಿಮಗೆ ಇಷ್ಟವಾದ ಆಕಾರಕ್ಕೆ ಚಾಕುವಿನಿಂದ ಕತ್ತರಿಸಿ.
- ಬಿಸಿ ಆರಿದ ಮೇಲೆ ಎಚ್ಚರಿಕೆಯಿಂದ ತೆಗೆಯಿರಿ.
- ರುಚಿಯಾದ ಮೃದುವಾದ ಮೈಸೂರ್ ಪಾಕ್ ಸವಿಯಲು ಸಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ