Majjige uppittu recipe in Kannada | ಮಜ್ಜಿಗೆ ಉಪ್ಪಿಟ್ಟು ಮಾಡುವ ವಿಧಾನ
ಮಜ್ಜಿಗೆ ಉಪ್ಪಿಟ್ಟು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ರವೆ
- 1 ಕಪ್ ದಪ್ಪ ಮಜ್ಜಿಗೆ
- 2 ಕಪ್ ನೀರು
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 1 ಒಣಮೆಣಸಿನಕಾಯಿ
- 1 ಟೀಸ್ಪೂನ್ ಶುಂಠಿ
- 2 ಹಸಿರು ಮೆಣಸಿನಕಾಯಿ
- 5-6 ಕರಿ ಬೇವಿನ ಎಲೆ
- 1 ಸಣ್ಣ ಈರುಳ್ಳಿ
- 2 ಟೇಬಲ್ ಚಮಚ ದೊಣ್ಣೆಮೆಣಸು
- 2 ಟೇಬಲ್ ಚಮಚ ಹಸಿಬಟಾಣಿ
- 1 ಸಣ್ಣ ಟೊಮೇಟೊ
- 2 - 3 ಟೇಬಲ್ ಚಮಚ ಅಡುಗೆ ಎಣ್ಣೆ
- ಒಂದು ಚಮಚ ತುಪ್ಪ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ತೆಂಗಿನತುರಿ
ಮಜ್ಜಿಗೆ ಉಪ್ಪಿಟ್ಟು ಮಾಡುವ ವಿಧಾನ:
- ರವೇಯನ್ನು ಒಂದು ಚಮಚ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಒಳ್ಳೆಯ ಘಮ ಬರುವವರೆಗೆ ಹುರಿಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಒಣಮೆಣಸು ಹಾಕಿಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಶುಂಠಿ, ಕರಿಬೇವು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ.
- ಈರುಳ್ಳಿ ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ಹಸಿಬಟಾಣಿ ಮತ್ತು ದೊಣ್ಣೆಮೆಣಸು ಸೇರಿಸಿ ಹುರಿಯಿರಿ.
- ಕತ್ತರಿಸಿದ ಟೊಮೇಟೊ ಹಾಕಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.
- ನಂತರ ಮಜ್ಜಿಗೆ ಮತ್ತು ನೀರು ಸೇರಿಸಿ. ಕುದಿಯಲು ಬಿಡಿ.
- ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
- ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ರವೇ ಹಾಕಿಮಗುಚಿ.
- ಗಟ್ಟಿ ಆದ ಮೇಲೆ ಒಂದು ಚಮಚ ತುಪ್ಪ ಹಾಕಿ ಮಗುಚಿ.
- ಸ್ಟವ್ ಆಫ್ ಮಾಡಿ. ಬಿಸಿಬಿಸಿಯಾಗಿ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ