Rave pongal recipe in Kannada | ರವೆ ಪೊಂಗಲ್ ಮಾಡುವ ವಿಧಾನ
ರವೆ ಪೊಂಗಲ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಮೀಡಿಯಂ ರವೆ
- 1/4 ಕಪ್ ಹೆಸರುಬೇಳೆ
- 1 ಟೇಬಲ್ ಸ್ಪೂನ್ ತುಪ್ಪ
- 1/2 ಟೀ ಸ್ಪೂನ್ ಸಾಸಿವೆ
- 1/2 ಟೀ ಸ್ಪೂನ್ ಜೀರಿಗೆ
- 1 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
- 8 - 10 ಗೋಡಂಬಿ
- 1-2 ಹಸಿರುಮೆಣಸಿನಕಾಯಿ
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
- 8 - 10 ಕರಿಬೇವಿನ ಎಲೆ
- ದೊಡ್ಡ ಚಿಟಿಕೆ ಅರಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 2 ಟೇಬಲ್ ಸ್ಪೂನ್ ತೆಂಗಿನತುರಿ
- ಉಪ್ಪು ರುಚಿಗೆ ತಕ್ಕಷ್ಟು
ರವೆ ಪೊಂಗಲ್ ಮಾಡುವ ವಿಧಾನ:
- ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ಕೆಲವು ನಿಮಿಷ ಹುರಿದರೆ ಸಾಕಾಗುವುದು.
- ಒಂದು ಕುಕ್ಕರ್‌ನಲ್ಲಿ ಹುರಿದ ಹೆಸರುಬೇಳೆಯನ್ನು ಹಾಕಿ ತೊಳೆಯಿರಿ.
- 1 ಕಪ್ ನೀರು (ಹೆಸರುಬೇಳೆಯ 4 ಪಟ್ಟು) ಹಾಕಿ 2 ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
- ನಂತರ ಒಂದು ಬಾಣಲೆಯನ್ನು ಬಿಸಿಮಾಡಿ. ಒಂದು ಚಮಚ ಎಣ್ಣೆ ಹಾಕಿ ರವೆಯನ್ನು ಘಮ ಬರುವವರೆಗೆ ಹುರಿಯಿರಿ.
- ಆಮೇಲೆ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ.
- ಜೀರಿಗೆ ಸಿಡಿದ ಕೂಡಲೇ ಗೋಡಂಬಿ, ಕಾಳುಮೆಣಸು, ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
- ಇಂಗನ್ನು ಸೇರಿಸಿ.
- ಅರಿಶಿನ ಪುಡಿ ಸೇರಿಸಿ.
- ತೆಂಗಿನ ತುರಿಯನ್ನು ಸೇರಿಸಿ ಮಗುಚಿ.
- ಈಗ ಬೇಯಿಸಿದ ಹೆಸರುಬೇಳೆ ಹಾಕಿ. 1.5 ಕಪ್ (ರವೆಯ ಮೂರು ಪಟ್ಟು) ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ.
- ಕುದಿಯಲು ಶುರುವಾದ ಕೂಡಲೇ ಹುರಿದ ರವೆ ಹಾಕಿ ಮಗುಚಿ.
- ಸ್ವಲ್ಪ ಗಟ್ಟಿ ಆಗುವವರೆಗೆ ಮಗುಚಿ ಸ್ಟವ್ ಆಫ್ ಮಾಡಿ. ಬಿಸಿ ಬಿಸಿ ರವೆ ಪೊಂಗಲ್ ನ್ನು ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ