ಸಬ್ಬಕ್ಕಿ ರೊಟ್ಟಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಸಬ್ಬಕ್ಕಿ
- 1/4 ಕಪ್ ಅಕ್ಕಿಹಿಟ್ಟು
- 1 ದೊಡ್ಡ ಆಲೂಗಡ್ಡೆ, ಬೇಯಿಸಿ ಸಿಪ್ಪೆ ತೆಗೆದಿದ್ದು
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಎಲೆ
- 2 ಹಸಿಮೆಣಸಿನಕಾಯಿ
- 1/2 ಟೀಸ್ಪೂನ್ ಜೀರಿಗೆ
- 2 ಟೇಬಲ್ ಚಮಚ ಹುರಿದು ಸಿಪ್ಪೆ ತೆಗೆದ ಶೇಂಗಾ ಅಥವಾ ಕಡ್ಲೆಕಾಯಿ
- 2 - 3 ಟೇಬಲ್ ಚಮಚ ನೀರು (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
- ರೊಟ್ಟಿ ಮಾಡಲು ಎಣ್ಣೆ
- 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ
ಮಸಾಲೆ ಅವಲಕ್ಕಿ ರೊಟ್ಟಿ ಮಾಡುವ ವಿಧಾನ:
- ಸಬ್ಬಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೆನೆಸಿ ಅಥವಾ ಸಬ್ಬಕ್ಕಿಯನ್ನು ಬೆರಳುಗಳಲ್ಲಿ ಪುಡಿ ಮಾಡಲು ಆಗುವಷ್ಟು ಹೊತ್ತು ನೆನೆಸಿರಬೇಕು.
- ನೆನೆಸಿದ ನಂತರ ನೀರು ಬಗ್ಗಿಸಿಕೊಳ್ಳಿ.
- ಅದಕ್ಕೆ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
- ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ.
- ಬೇಕಾದಲ್ಲಿ ಹುರಿದು ಸಿಪ್ಪೆ ತೆಗೆದ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಸೇರಿಸಿ.
- ಅಗತ್ಯವಿದ್ದಲ್ಲಿ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
- ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟು ಇರಿಸಿ.
- ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ತಟ್ಟುತ್ತಾ ವೃತ್ತಾಕಾರದ ರೊಟ್ಟಿಯನ್ನುಮಾಡಿ.
- ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಬಾಳೆ ಎಲೆಯಲ್ಲಿ ಮಾಡಿದರೆ ಕೆಲಸ ಸುಲಭವಾಗುವುದು. ಮೇಲೆ ಹಾಕಿದ ವಿಡಿಯೋ ನೋಡಿ.
- ಮೇಲಿನಿಂದ ಎಣ್ಣೆ ಹಾಕಿ ಕಾಯಿಸಿ. ರೊಟ್ಟಿಯನ್ನು ತಿರುವಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ.
- ಚಟ್ನಿ ಅಥವಾ ಅಥವಾ ಹಾಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ