Jeerige ganji recipe in Kannada | ಜೀರಿಗೆ ಗಂಜಿ ಮಾಡುವ ವಿಧಾನ
ಜೀರಿಗೆ ಗಂಜಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ
- 1/2 ಕಪ್ ಹಸಿ ತೆಂಗಿನತುರಿ
- 1 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 1 ಟೀಸ್ಪೂನ್ ತುಪ್ಪ (ಬಡಿಸಲು)
- ಉಪ್ಪಿನಕಾಯಿ (ಬಡಿಸಲು)
ಸೌತೆಕಾಯಿ ಪಚಡಿಗೆ ಬೇಕಾಗುವ ಪದಾರ್ಥಗಳು:
- 1/2 ಸೌತೆಕಾಯಿ
- 1/2 ಟೀಸ್ಪೂನ್ ಶುಂಠಿ
- 1/2 ಟೀಸ್ಪೂನ್ ಹಸಿರು ಮೆಣಸಿನಕಾಯಿ
- 1 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- 3/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
ಜೀರಿಗೆ ಗಂಜಿ ಮಾಡುವ ವಿಧಾನ:
- ಅಕ್ಕಿಯನ್ನು ಚೆನ್ನಾಗಿ ತೊಳೆದು, ನಾಲ್ಕು ಪಟ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ.
- ತೆಂಗಿನತುರಿ ಮತ್ತು ಜೀರಿಗೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಬೇಯಿಸಿದ ಅನ್ನಕ್ಕೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ.
- 1/4 ಟೀಸ್ಪೂನ್ ಅಥವಾ ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ. ಬೇಕಾದಲ್ಲಿ ಸ್ವಲ್ಪ ಬೆಲ್ಲ ಸಹ ಸೇರಿಸಬಹುದು.
- ಒಂದೆರಡು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ.
- ಪಚಡಿ ಮಾಡಲು ಸೌತೆಕಾಯಿಯನ್ನು ಸಣ್ಣಗೆ ಕೊಚ್ಚಿಕೊಳ್ಳಿ.
- ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ.
- ಬಿಸಿ ಗಂಜಿಯನ್ನು ತುಪ್ಪ, ಪಚಡಿ ಮತ್ತು ಉಪ್ಪಿನಕಾಯಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ