Thuppa dose recipe in Kannada | ಇಡ್ಲಿ ಅಕ್ಕಿಯಿಂದ ತುಪ್ಪ ದೋಸೆ ಮಾಡುವ ವಿಧಾನ
ತುಪ್ಪ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕುಸುಬಲಕ್ಕಿ ಅಥವಾ ಇಡ್ಲಿ ಅಕ್ಕಿ
- 1/4 ಕಪ್ ಉದ್ದಿನ ಬೇಳೆ
- 1/2 ಟೀಸ್ಪೂನ್ ಮೆಂತೆ
- 1/2 ಕಪ್ ಅವಲಕ್ಕಿ
- ಉಪ್ಪು ನಿಮ್ಮ ರುಚಿ ಪ್ರಕಾರ
- ತುಪ್ಪ ದೋಸೆ ಮಾಡಲು
ತುಪ್ಪ ದೋಸೆ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
- ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು ಬೇರೆ ಪಾತ್ರೆಯಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ.
- ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ.
- ನೆನೆಸಿದ ನಂತರ ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು.
- ಅವಲಕ್ಕಿಯನ್ನು ಅರೆದು ಅದೇ ಪಾತ್ರೆಗೆ ಹಾಕಿ.
- ನೆನೆಸಿದ ಅಕ್ಕಿಯ ನೀರು ಬಸಿದು, ನುಣ್ಣಗೆ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಸ್ವಲ್ಪ ತರಿ ತರಿ ಇದ್ದರೆ ಪರವಾಗಿಲ್ಲ.
- ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. ಚಳಿಗಾಲ ಸಮಯ ಆದಲ್ಲಿ ಸುಮಾರು 12 ಗಂಟೆ ಬೇಕಾಗಬಹುದು.
- ಹುದುಗುವಿಕೆಯ ನಂತರ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ದೋಸೆ ಹೆಂಚನ್ನು ಬಿಸಿ ಮಾಡಿ. ಸ್ವಲ್ಪ ಹಿಟ್ಟು ತೆಗೆದುಕೊಂಡು ದೋಸೆ ಮಾಡಿ.
- ಮುಚ್ಚಳ ಮುಚ್ಚಿ ಕಾಯಿಸಿ.
- ಮೇಲಿನಿಂದ ತುಪ್ಪ ಹಾಕಿ ಕಾಯಿಸಿ.
- ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ