Hesaru kaalu saaru recipe in Kannada |ಹೆಸರು ಕಾಳು ಸಾರು ಮಾಡುವ ವಿಧಾನ
ಹೆಸರು ಕಾಳು ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)
- 1/2 ಕಪ್ ಹೆಸರು ಕಾಳು
- 1 ಟೊಮೇಟೊ
- 1 ಟೇಬಲ್ ಚಮಚ ಸಾರಿನ ಪುಡಿ
- ದೊಡ್ಡ ಚಿಟಿಕೆ ಅರಿಶಿನ
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು
- 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಒಣಮೆಣಸಿನಕಾಯಿ
- ಒಂದು ಚಿಟಿಕೆ ಇಂಗು ಅಥವಾ 4 ಎಸಳು ಬೆಳ್ಳುಳ್ಳಿ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಹೆಸರು ಕಾಳು ಸಾರು ಮಾಡುವ ವಿಧಾನ:
- ಹೆಸರು ಕಾಳನ್ನು ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗಾಗುವವರೆಗೆ ಬೇಯಿಸಿ. ನೆನೆಸಿ ಅಥವಾ ಮೊಳಕೆ ಬರಿಸಿ ಸಹ ಉಪಯೋಗಿಸಬಹುದು.
- ಬೇಯಿಸಿದ ನಂತರ, ಬಸಿದು, ನೀರು ಮತ್ತು ಕಾಳನ್ನು ಬೇರ್ಪಡಿಸಿ.
- ಬಸಿದ ನೀರಿಗೆ, ಕತ್ತರಿಸಿದ ಟೊಮೇಟೊ ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು, ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ.
- ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.
- ಆ ಸಮಯದಲ್ಲಿ ಎರಡರಿಂದ ಮೂರು ಸೌಟು ಬೇಯಿಸಿದ ಹೆಸರುಕಾಳನ್ನು ಅರೆದು ಬೆಂದ ಟೊಮ್ಯಾಟೊಗೆ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
- ಸಾರಿನ ಪುಡಿ ಮತ್ತು ಅರಿಶಿನ ಸೇರಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ.
- ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ.
- 2 ಚಮಚಎಣ್ಣೆ, 1/2 ಚಮಚ ಸಾಸಿವೆ, ಇಂಗು (ಅಥವಾ ಜಜ್ಜಿದ ಬೆಳ್ಳುಳ್ಳಿ) ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ