Southekayi sasive recipe in kannada | ಸೌತೆಕಾಯಿ ಸಾಸಿವೆ (ಹಸಿಗೊಜ್ಜು) ಮಾಡುವ ವಿಧಾನ
ಸೌತೆಕಾಯಿ ಸಾಸಿವೆ ವಿಡಿಯೋ
ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಸೌತೆಕಾಯಿ
- 1 - 2 ಒಣಮೆಣಸಿನಕಾಯಿ
- 1/2 ಕಪ್ ತೆಂಗಿನ ತುರಿ
- 1/2 ಟೀಸ್ಪೂನ್ ಸಾಸಿವೆ
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಸೌತೆಕಾಯಿ
- 1/4 ಕಪ್ ಮೊಸರು
- 1 - 2 ಹಸಿ ಮೆಣಸಿನಕಾಯಿ
- 1/2 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಸಾಸಿವೆ
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಚಮಚ ಸಾಸಿವೆ
- 1/2 ಕೆಂಪು ಮೆಣಸಿನಕಾಯಿ
- 4 -5 ಕರಿಬೇವು
- 2 ಟೀಸ್ಪೂನ್ ಅಡುಗೆ ಎಣ್ಣೆ
ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೧:
- ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ.
- ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ತುರಿದ ಅಥವಾ ಕೊಚ್ಚಿದ ಸೌತೆಕಾಯಿ ಹಾಕಿ ಒಂದೆರಡು ಸುತ್ತು ಅರೆಯಿರಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೨:
- ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ.
- ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ತುರಿದ ಅಥವಾ ಕೊಚ್ಚಿದ ಸೌತೆಕಾಯಿ, ಮೊಸರು ಮತ್ತು ಉಪ್ಪು ಸೇರಿಸಿ. ಒಂದೆರಡು ಸುತ್ತು ಅರೆಯಿರಿ.
- ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ