Bellulli tambli recipe in Kannada | ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ
ಬೆಳ್ಳುಳ್ಳಿ ತಂಬ್ಳಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
- 1 - 2 ಒಣ ಮೆಣಸಿನಕಾಯಿ
- 1/4 ಕಪ್ ತೆಂಗಿನ ತುರಿ
- 1/4 - 1/2 ಕಪ್ ಮೊಸರು ಅಥವಾ ಮಜ್ಜಿಗೆ
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- ಸ್ವಲ್ಪ ಕರಿಬೇವು
- 1 ಟೀಸ್ಪೂನ್ ಅಡುಗೆ ಎಣ್ಣೆ
ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ:
- ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ.
- ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಮೊದಲು ಒಣ ಮೆಣಸಿನಕಾಯಿಯನ್ನು ಹುರಿಯಿರಿ.
- ನಂತರ ಚೂರು ಮಾಡಿದ ಬೆಳ್ಳುಳ್ಳಿಯನ್ನು ಹುರಿಯಿರಿ.
- ಒಂದು ಮಿಕ್ಸಿ ಜಾರ್ನಲ್ಲಿ ಹುರಿದ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ತೆಂಗಿನತುರಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಕೊನೆಯಲ್ಲಿ ಉಪ್ಪು ಮತ್ತು ಮೊಸರು ಸೇರಿಸಿ ಒಂದೆರಡು ಸುತ್ತು ಅರೆಯಿರಿ.
- ಒಂದು ಪಾತ್ರೆಗೆ ಬಗ್ಗಿಸಿ. ಸಾಸಿವೆ, ಕರಿಬೇವು ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ