Quick onion sambar recipe in Kannada | 10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ
10 ನಿಮಿಷದಲ್ಲಿ ಸಾಂಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಟೊಮೇಟೊ
- 2 ಟೇಬಲ್ ಚಮಚ ಹುರಿಗಡಲೆ
- 1 ಈರುಳ್ಳಿ
- 1 ಟೀಸ್ಪೂನ್ ಅಚ್ಚಖಾರದ ಪುಡಿ
- 1 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಪುಡಿ
- 1/4 ಟೀಸ್ಪೂನ್ ಗರಂ ಮಸಾಲಾ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- ಉಪ್ಪು ನಿಮ್ಮ ರುಚಿ ಪ್ರಕಾರ
- 1 ಟೀಸ್ಪೂನ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
- ಗೋಲಿ ಗಾತ್ರದ ಹುಣಿಸೇಹಣ್ಣು (ಅಥವಾ ನಿಮ್ಮ ರುಚಿ ಪ್ರಕಾರ)
- ಸ್ವಲ್ಪ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- ಒಂದು ಚಿಟಿಕೆ ಇಂಗು
- 5 - 6 ಕರಿಬೇವು
- 2 ಟೇಬಲ್ ಚಮಚ ಅಡುಗೆ ಎಣ್ಣೆ
10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ:
- ಮಿಕ್ಸಿಯಲ್ಲಿ ಟೊಮೇಟೊ ಮತ್ತು ಹುರಿಗಡಲೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.
- ಕತ್ತರಿಸಿದ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.
- ಅಚ್ಚಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಅರಿಶಿನ ಪುಡಿ ಸೇರಿಸಿ ಹುರಿಯಿರಿ.
- ಅರೆದ ಟೊಮೇಟೊ ಮತ್ತು ಹುರಿಗಡಲೆ ಪೇಸ್ಟ್ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ.
- ನಿಮ್ಮ ರುಚಿ ಪ್ರಕಾರ ಉಪ್ಪು, ಬೆಲ್ಲ ಮತ್ತು ಹುಣಿಸೆರಸವನ್ನು ಸೇರಿಸಿ.
- ಐದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. ದೋಸೆ ಅಥವಾ ಇಡ್ಲಿಯೊಂದಿಗೂ ಬಡಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ