Menthe thambli recipe in kannada | ಮೆಂತೆ ತಂಬ್ಳಿ ಮಾಡುವ ವಿಧಾನ
ಮೆಂತೆ ತಂಬ್ಳಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಒಣಮೆಣಸಿನಕಾಯಿ ಅಥವಾ ಒಂದು ಚಮಚ ಕಾಳು ಮೆಣಸು
- ಒಂದು ಚಮಚ ಮೆಂತ್ಯ
- ಒಂದು ಚಮಚ ಜೀರಿಗೆ
- 1/2 ಕಪ್ ಮೊಸರು
- 1/2 ಕಪ್ ತೆಂಗಿನ ತುರಿ
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ತುಪ್ಪ ಅಥವಾ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಚಮಚ ಸಾಸಿವೆ
- ಚಿಟಿಕೆ ಇಂಗು
- ಸ್ವಲ್ಪ ಕರಿಬೇವು
ಮೆಂತೆ ತಂಬ್ಳಿ ಮಾಡುವ ವಿಧಾನ:
- ಒಗ್ಗರಣೆ ಸೌಟು ಅಥವಾ ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ.
- ಒಣಮೆಣಸಿನಕಾಯಿ (ಅಥವಾ ಕರಿಮೆಣಸು), ಮೆಂತ್ಯ ಮತ್ತು ಜೀರಿಗೆ ಸೇರಿಸಿ ಮಧ್ಯಮ ಉರಿಯಲ್ಲಿ ಜೀರಿಗೆ ಚಟಪಟ ಅನ್ನುವವರೆಗೆ ಹುರಿಯಿರಿ.
- ನಂತರ ಮಿಕ್ಸಿಯಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಳ್ಳಿ.
- ಅದಕ್ಕೆ ತೆಂಗಿನ ತುರಿ ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಮೊಸರನ್ನು ಸೇರಿಸಿ, ಇನ್ನೊಂದು ಸುತ್ತು ಅರೆಯಿರಿ.
- ನಂತ್ರ ಒಂದು ಬೌಲ್ ನಲ್ಲಿ ಅರೆದ ಮಿಶ್ರಣ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ. ತಂಬ್ಳಿ ಸ್ವಲ್ಪ ನೀರಾಗಿರಬೇಕು.
- ಎಣ್ಣೆ, ಮೆಣಸಿನಕಾಯಿ, ಇಂಗು, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ.
- ಬಿಸಿಯಾದ ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ