Pop corn recipe in Kannada | ಪಾಪ್ ಕಾರ್ನ್ ಮಾಡುವ ವಿಧಾನ
ಪಾಪ್ ಕಾರ್ನ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಒಣಗಿದ ಮೆಕ್ಕೆಜೋಳ
- 1/4 ಟೀಸ್ಪೂನ್ ಉಪ್ಪು
- ದೊಡ್ಡ ಚಿಟಿಕೆ ಅರಿಶಿನ
- 1 ಟೇಬಲ್ ಚಮಚ ಎಣ್ಣೆ
- ಚಿಟಿಕೆ ಅಚ್ಚಖಾರದ ಪುಡಿ (ಬೇಕಾದಲ್ಲಿ)
- ಚಿಟಿಕೆ ಚಾಟ್ ಮಸಾಲಾ (ಬೇಕಾದಲ್ಲಿ)
ಪಾಪ್ ಕಾರ್ನ್ ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿಮಾಡಿ.
- ಅದಕ್ಕೆ ಒಣಗಿದ ಜೋಳವನ್ನು ಸೇರಿಸಿ.
- ಜೊತೆಗೆ ಉಪ್ಪು ಮತ್ತು ಅರಿಶಿನ ಸೇರಿಸಿ.
- ದೊಡ್ಡ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಜೊತೆಯಲ್ಲೇ, ಕುಕ್ಕರ್ ಮುಚ್ಚಳವನ್ನು ವೆಯಿಟ್ ಮತ್ತು ಗ್ಯಾಸ್ಕೆಟ್ ತೆಗೆದು ಹತ್ತಿರ ಇಟ್ಟುಕೊಳ್ಳಿ.
- ಜೋಳ ಅರಳಲು ಅಥವಾ ಪಾಪ್ ಆಗಲು ಪ್ರಾರಂಭವಾದ ಕೂಡಲೇ, ಮುಚ್ಚಳ ಮುಚ್ಚಿ. ಸ್ಟವ್ ಮಧ್ಯಮ ಉರಿಯಲ್ಲಿಡಿ. ಗಮನಿಸಿ... ವೆಯಿಟ್ ಇಲ್ಲ ಮತ್ತು ಗ್ಯಾಸ್ಕೆಟ್ ಇಲ್ಲ.
- ಜೋಳ ಅರಳುವ ಸದ್ದು ಕಡಿಮೆ ಆದ ಕೂಡಲೇ ಸ್ಟವ್ ಆಫ್ ಮಾಡಿ.
- ಮುಚ್ಚಳ ತೆಗೆದು, ಬೇಕಾದಲ್ಲಿ ಅಚ್ಚಖಾರದ ಪುಡಿ ಮತ್ತು ಚಾಟ್ ಮಸಾಲಾ ಅಥವಾ ಇನ್ನಾವುದೇ ಮಸಾಲಾ ಸೇರಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ