ಶುಕ್ರವಾರ, ಏಪ್ರಿಲ್ 5, 2019

Capsicum chutney recipe in Kannada | ದೊಣ್ಣೆಮೆಣಸು ಚಟ್ನಿ ಮಾಡುವ ವಿಧಾನ

Capsicum chutney recipe in Kannada

Capsicum chutney recipe in Kannada | ದೊಣ್ಣೆಮೆಣಸು ಚಟ್ನಿ ಮಾಡುವ ವಿಧಾನ

ದೊಣ್ಣೆಮೆಣಸು ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಒಣಮೆಣಸಿನಕಾಯಿ 
  2. 2 ಟೀಸ್ಪೂನ್ ಕಡ್ಲೆಬೇಳೆ 
  3. 2 ಟೀಸ್ಪೂನ್ ಉದ್ದಿನಬೇಳೆ
  4. 1 ಮಧ್ಯಮ ಗಾತ್ರದ ಈರುಳ್ಳಿ
  5. 1 ಮಧ್ಯಮ ಗಾತ್ರದ ಟೊಮೇಟೊ ಅಥವಾ ಸ್ವಲ್ಪ ಹುಣಿಸೇಹಣ್ಣು
  6. 1 ಮಧ್ಯಮ ಗಾತ್ರದ ದೊಣ್ಣೆಮೆಣಸು
  7. 1/2 ಕಪ್ ತೆಂಗಿನತುರಿ
  8. 4 - 5 ಕರಿಬೇವಿನ ಎಲೆ
  9. ಒಂದು ದೊಡ್ಡ ಚಿಟಿಕೆ ಅರಿಶಿನ
  10. ಉಪ್ಪು ರುಚಿಗೆ ತಕ್ಕಷ್ಟು
  11. 1 ಟೇಬಲ್ ಚಮಚ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಉದ್ದಿನಬೇಳೆ
  4. 4 - 5 ಕರಿಬೇವಿನ ಎಲೆ
  5. ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ಅಡುಗೆ ಎಣ್ಣೆ

ದೊಣ್ಣೆಮೆಣಸು ಚಟ್ನಿ ಮಾಡುವ ವಿಧಾನ:

  1. ಟೊಮೇಟೊ, ದೊಣ್ಣೆಮೆಣಸು ಮತ್ತು ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. 
  3. ಒಣಮೆಣಸು, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಬೇಳೆ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  4. ನಂತ್ರ ಕರಿಬೇವು ಮತ್ತು ಕತ್ತರಿಸಿದ ಈರುಳ್ಳಿ ಹಾಕಿ. ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
  5. ಈರುಳ್ಳಿ ಮೆತ್ತಗಾದ ಮೇಲೆ, ಕತ್ತರಿಸಿದ ದೊಣ್ಣೆಮೆಣಸು ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಆಮೇಲೆ ಕತ್ತರಿಸಿದ ಟೊಮೇಟೊ ಹಾಕಿ ಹುರಿಯಿರಿ. ಟೊಮೇಟೊ ಬದಲು ಹುಣಿಸೆರಸ ಹಾಕಬಹುದು. 
  7. ಅರಿಶಿನ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  8. ಸ್ಟವ್ ಆಫ್ ಮಾಡಿ ತೆಂಗಿನತುರಿ ಮತ್ತು ಉಪ್ಪು ಸೇರಿಸಿ. 
  9. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. 
  10. ಕೊನೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಾಡಿ. 
  11. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...