Uppu kadle recipe in Kannada | ಉಪ್ಪು ಕಡ್ಲೆ ಅಥವಾ ಹುರಿಗಡಲೆ ಮಾಡುವ ವಿಧಾನ
ಉಪ್ಪು ಕಡ್ಲೆ ಅಥವಾ ಹುರಿಗಡಲೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡಲೆ ಕಾಳು ಅಥವಾ ಕೆಂಪು ಕಡ್ಲೆ
- 1 ಕಪ್ ಉಪ್ಪು, ಹುರಿಯಲು
ಉಪ್ಪು ಕಡ್ಲೆ ಅಥವಾ ಹುರಿಗಡಲೆ ಮಾಡುವ ವಿಧಾನ:
- ಕಡಲೆ ಕಾಳನ್ನು ತೊಳೆದು, ನೀರನ್ನು ಸಂಪೂರ್ಣ ಬಗ್ಗಿಸಿ. ನೆನೆಸುವ ಅವಶ್ಯಕತೆ ಇಲ್ಲ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಒಂದು ಕಪ್ ಉಪ್ಪನ್ನು ಆಗಾಗ್ಯೆ ಮಗುಚುತ್ತಾ ಚೆನ್ನಾಗಿ ಬಿಸಿ ಮಾಡಿ.
- ಅದಕ್ಕೆ ಒಂದು ಮುಷ್ಠಿ ತೊಳೆದ ಕಾಳುಗಳನ್ನು ಹಾಕಿ ದೊಡ್ಡ ಉರಿಯಲ್ಲಿ ಹುರಿಯಬೇಕು. ಕಾಳಿನಲ್ಲಿರುವ ನೀರಿನಂಶ ಉಪ್ಪು ಅಂಟಲು ಸಹಾಯವಾಗುತ್ತದೆ.
- ಒಂದೆರಡು ನಿಮಿಷ ಹುರಿಯುವಾಗ, ಕಾಳುಗಳು ಅರಳಿ ಚಟಪಟ ಎನ್ನುತ್ತದೆ. ಒಂದು ಹತ್ತು ಸೆಕೆಂಡ್ ಹುರಿಯುವುದನ್ನ ಮುಂದುವರೆಸಿ.
- ನೆಟ್ ಅಥವಾ ಬಲೆಯಂತಿರುವ ಸೌಟಿನಿಂದ ತೆಗೆಯಿರಿ. ಇದರಿಂದ ಕಡ್ಲೆ ಮಾತ್ರ ತೆಗೆಯಲು ಅನುಕೂಲವಾಗುತ್ತದೆ.
- ಹೀಗೆ ಒಂದೊಂದೇ ಮುಷ್ಟಿ ಕಾಳುಗಳನ್ನು ಹಾಕುತ್ತ, ಎಲ್ಲ ಕಡ್ಲೆಯನ್ನು ಹುರಿದು ಮುಗಿಸಿ.
- ಬಿಸಿ ಆರಿದ ಮೇಲೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ