Genasale recipe in Kannada | ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ
ಗೆಣಸಾಲೆ ಅಥವಾ ಕಡುಬು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ (ನಾನು ದೋಸೆ ಅಕ್ಕಿ ಉಪಯೋಗಿಸಿದ್ದೇನೆ)
- 0.5 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು.
- 0.5 ಕಪ್ ಉದ್ದಿನಬೇಳೆ
- 2 ಸೆಮೀ ಉದ್ದದ ಶುಂಠಿ
- 2 - 3 ಹಸಿರುಮೆಣಸಿನಕಾಯಿ
- ದೊಡ್ಡ ಚಿಟಿಕೆ ಇಂಗು
- ಬಾಳೆಎಲೆ
ಸಿಹಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 0.5 ಕಪ್ ತೆಂಗಿನ ತುರಿ
- 1/4 ಕಪ್ ಬೆಲ್ಲ
ಗೆಣಸಾಲೆ ಅಥವಾ ಕಡುಬು ಮಾಡುವ ವಿಧಾನ:
- ಅಕ್ಕಿಯನ್ನು 2 - 3 ಘಂಟೆ ಕಾಲ ನೆನೆಸಿ.
- ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆಯನ್ನು 2 - 3 ಘಂಟೆ ಕಾಲ ನೆನೆಸಿ.
- ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಟ್ಟುಕೊಳ್ಳಿ.
- ಅಕ್ಕಿ ನೆನೆದ ಮೇಲೆ, ತೆಂಗಿನಕಾಯಿ ಮತ್ತು ಉಪ್ಪಿನೊಂದಿಗೆ, ಅಗತ್ಯವಿರುವಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಅರೆಯಿರಿ.
- ಹಿಟ್ಟು ಮಿಲ್ಕ್ ಶೇಕ್ ಗಿಂತ ಸ್ವಲ್ಪ ಗಟ್ಟಿ ಇರಲಿ. ಒಂದು ಪಾತ್ರೆಗೆ ಬಗ್ಗಿಸಿಡಿ.
- ಉದ್ದಿನಬೇಳೆಯನ್ನು, ಶುಂಠಿ, ಹಸಿಮೆಣಸು ಮತ್ತು ಉಪ್ಪಿನ ಜೊತೆ, ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಹಿಟ್ಟು ದಪ್ಪ ದೋಸೆ ಹಿಟ್ಟಿನಂತಿರಲಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಇಂಗು ಸೇರಿಸಿ ಕಲಸಿಟ್ಟುಕೊಳ್ಳಿ.
- ನಂತ್ರ ಇಡ್ಲಿ ಪಾತ್ರೆಯಲ್ಲಿ ನೀರು ಕಾಯಲು ಇಡೀ.
- ಆಮೇಲೆ ಬಾಳೆಎಲೆ ತೆಗೆದುಕೊಂಡು, ಒಂದು ಸೌಟು ಅಕ್ಕಿ ಹಿಟ್ಟನ್ನು ಹರಡಿ.
- ಮೇಲಿನಿಂದ ಉದ್ದಿನಹಿಟ್ಟನ್ನು ಹರಡಿ.
- ಬಾಳೆಎಲೆಯನ್ನು ಮಡಚಿ, ಇಡ್ಲಿ ಪಾತ್ರೆಯಲ್ಲಿಡಿ.
- ಸಿಹಿ ಮಾಡಲು, ಅಕ್ಕಿ ಹಿಟ್ಟಿನ ಮೇಲೆ ಪುಡಿಮಾಡಿದ ಬೆಲ್ಲ ಮತ್ತು ತೆಂಗಿನತುರಿಯ ಮಿಶ್ರಣ ಹರಡಿ.
- ಹೀಗೆ ಎಲ್ಲ ಕಡುಬನ್ನು ಬಾಳೆಎಲೆಯಲ್ಲಿ ಮಡಚಿ ಇಟ್ಟು, 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ.
- ಖಾರ ಕಡುಬನ್ನು ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ. ಸಿಹಿಯನ್ನು ತುಪ್ಪದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ