Uppu kadlekai recipe in Kannada | ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ಮಾಡುವ ವಿಧಾನ
ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡ್ಲೆಕಾಯಿ ಅಥವಾ ಶೇಂಗಾ
- 1 ಕಪ್ ಉಪ್ಪು, ಹುರಿಯಲು
ಉಪ್ಪು ಕಡ್ಲೆಕಾಯಿ ಅಥವಾ ಶೇಂಗಾ ಮಾಡುವ ವಿಧಾನ:
- ಶೇಂಗಾ ಅಥವಾ ಕಡಲೆ ಕಾಯಿಯನ್ನು ಒಂದು ನಿಮಿಷ ನೀರಿನಲ್ಲಿ ನೆನೆಸಿ.
- ನಂತ್ರ ನೀರನ್ನು ಸಂಪೂರ್ಣ ಬಗ್ಗಿಸಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಒಂದು ಕಪ್ ಉಪ್ಪನ್ನು ಆಗಾಗ್ಯೆ ಮಗುಚುತ್ತಾ ಚೆನ್ನಾಗಿ ಬಿಸಿ ಮಾಡಿ.
- ಅದಕ್ಕೆ ನೆನೆಸಿ (ಒಂದು ನಿಮಿಷ), ನೀರುಬಗ್ಗಿಸಿದ ಕಾಳುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಕಾಳಿನಲ್ಲಿರುವ ನೀರಿನಂಶ ಉಪ್ಪು ಅಂಟಲು ಸಹಾಯವಾಗುತ್ತದೆ.
- ಮೊದಲಿಗೆ ಕಾಳುಗಳು ಒದ್ದೆಯಾಗಿರುತ್ತದೆ.
- ಸ್ವಲ್ಪ ಸಮಯದ ನಂತ್ರ ಒಣಗುತ್ತದೆ. ಹುರಿಯುವುದನ್ನ ಮುಂದುವರೆಸಿ.
- ಕಂದು ಬಣ್ಣ ಬಂದಾಗ ಕಾಳುಗಳನ್ನು ತೆಗೆಯಬೇಕು. ಒಂದು ಕಡ್ಲೆಕಾಯಿಯನ್ನು ತಿಂದು ನೋಡಿ.
- ನಂತ್ರ ನೆಟ್ ಅಥವಾ ಬಲೆಯಂತಿರುವ ಸೌಟಿನಿಂದ ತೆಗೆಯಿರಿ. ಇದರಿಂದ ಕಡ್ಲೆಕಾಯಿ ಮಾತ್ರ ತೆಗೆಯಲು ಅನುಕೂಲವಾಗುತ್ತದೆ.
- ಬಿಸಿ ಕಡಿಮೆ ಆದ ಮೇಲೆ ಮೇಲೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ